ಬೆಂಗಳೂರಿನ ನಡು ರಸ್ತೆಯಲ್ಲಿಯೇ ಕೈ ಕೈ ಮಿಲಾಯಿಸಿ ವಿದ್ಯಾರ್ಥಿನಿಯರು ಜಗಳವಾಡಿದ ಘಟನೆ ಸೆಂಟ್ ಮಾರ್ಕ್ಸ್ ರಸ್ತೆಯಲ್ಲಿ ನಡೆದಿದೆ. ಖಾಸಗಿ ಶಾಲಾ ವಿದ್ಯಾರ್ಥಿನಿಯರ ಜೊತೆ ಪಾಲಕರು ಭಾಗಿಯಾಗಿದ್ದು ವಿಪರ್ಯಾಸವೇ ಆಗಿದೆ.
ಸುಮಾರು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ನಡುವೆ ಗಲಾಟೆಯಾಗಿದೆ. ಗಲಾಟೆಗೆ ಎನು ಕಾರಣ ಎಂದು ಇನ್ನು ತಿಳಿದು ಬಂದಿಲ್ಲ . ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ .
ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿನಿಯರ ಜಡೆ ಜಗಳದ ವಿಡಿಯೋ ಸಖತ್ ವೈರಲಾಗಿದೆ. ಶಾಲಾ ಆಡಳಿತ ಮಂಡಳಿ ಕೂಡ ಈ ಕುರಿತು ಏನು ಪ್ರತಿಕ್ರಿಯೆ ನೀಡಿಲ್ಲ .
ಇದನ್ನೂ ಓದಿ :- ಹಿಜಾಬ್ ಯಾರು ಪ್ರಾರಂಭ ಮಾಡಿದ್ದು ಅನ್ನೋದು ಜಗತ್ತಿಗೆ ಗೊತ್ತಿದೆ – ಬೊಮ್ಮಾಯಿ