ವರದಿ : ಧನು ಯಲಗಚ್
ಬೆಂಗಳೂರು: ಟಾಲಿವುಡ್‍ನ ಬ್ಯಾಚುಲರ್, ಮೋಸ್ಟ್ ಅಟ್ರ್ಯಾಕ್ಟಿವ್ ಪರ್ಸನಾಲಿಟಿ, ಹ್ಯಾಂಡ್ಸಮ್ ಹಂಕ್ ಪ್ರಭಾಸ್ ಬಾಹುಬಲಿ ಸಿನಿಮಾದ ನಂತರ ಇಂಟರ್‍ನ್ಯಾಷನಲ್ ಸ್ಟಾರ್ ಆಗಿ ಗುರ್ತಿಸಿಕೊಂಡಿದ್ದಾರೆ. ಹೇಳಿಕೇಳಿ ಇಂಟರ್ನ್ಯಾಷನಲ್ ಸ್ಟಾರ್ ಅಂದ್ರೆ ಸಂಭಾವನೆ ಕೇಳ್ಬೇಕಾ..? ಅಬ್ಬಬ್ಬಾ ಈ ಬಾಹುಬಲಿಯ ಸಂಭಾವನೆ ಕೇಳಿದ್ರೆ ಎಂತವ್ರು ಕೂಡಾ ಒಂದು ಕ್ಷಣ ಹುಬ್ಬಾರಿಸದೇ ಇರೋಲ್ಲಾ.
ಪ್ರಭಾಸ್ ಟಾಲಿವುಡ್‍ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ವಿಭಿನ್ನ ಕ್ಯಾರೆಕ್ಟರ್ ಪ್ಲೇ ಮಾಡ್ತಾ ವರ್ಷದಿಂದ ವರ್ಷಕ್ಕೆ ಅಭಿಮಾನಿ ಬಳಗವನ್ನ ಹೆಚ್ಚಿಸಿಕೊಂಡು ಬಂದಿರೋ ನಟ. ಕೇವಲ ಆಂಧ್ರನಾಡಿನಲ್ಲಷ್ಟೇ ಅಲ್ದೆ, ವಲ್ರ್ಡ್‍ವೈಡ್ ಫ್ಯಾನ್ಸ್ ಹೊಂದಿರೋ ನಟ ಪ್ರಭಾಸ್. ಅಫ್ಕೋರ್ಸ್ ಸಿನಿಮಾದಿಂದ ಸಿನಿಮಾಗೆ ಸಂಭಾವನೆ ಕೂಡಾ ಹೆಚ್ಚಾಗ್ತಾನೆ ಇರತ್ತೆ. ಹೆಚ್ಚಾಗಿರೋದು ಅಂದ್ರೆ ನಾಟ್ ಎ ಸಿಂಗಲ್ ಕ್ರೋರ್, ಕೋಟಿ ಕೋಟಿ.
ಇವ್ರ ಸಂಭಾವನೆ ಒಂದು ಬಿಗ್ ಬಜೆಟ್ ಸಿನಿಮಾವನ್ನ ತಯಾರು ಮಾಡುವಷ್ಟಾಗಿರೋದು ಎಲ್ರೂ ಹುಬ್ಬೇರಿಸುವಂತೆ ಮಾಡಿದೆ. ಹೌದು, ಪ್ರಭಾಸ್ ಸಂಭಾವನೆ ವಿಚಾರ ಇದೀಗ ಎಲ್ಲೆಲ್ಲೂ ಸೌಂಡ್ ಮಾಡ್ತಿದೆ. ಅಂದಹಾಗೆ ಪ್ರಭಾಸ್ ಬಾಹುಬಲಿ ನಂತರ ತೆರೆಗೆ ಬಂದ ಸಾಹೊ ಸಿನಿಮಾಗೆನೇ 100ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಹೌದು, ಮೂಲಗಳ ಪ್ರಕಾರ ಪ್ರಭಾಸ್ ಭಾರತೀಯ ಚಿತ್ರರಂಗದಲ್ಲಿ ಅತೀಹೆಚ್ಚು ಸಂಭಾವನೆ ಪಡೆಯುವ ನಟನಂತೆ.
ನೂರು ಕೋಟಿ ಸಂಭಾವನೆ ಪಡೆಯುವ ಏಕೈಕ ನಟನೆಂದ್ರೆ ಟಾಲಿವುಡ್‍ನ ಪ್ರಭಾಸ್, ಎಸ್.ಎಸ್.ರಾಜ್‍ಮೌಳಿ ನಿರ್ದೇಶನದ ಬಾಹುಬಲಿ ಸಿರೀಸ್‍ನ ನಂತರ ನಟ ಪ್ರಭಾಸ್‍ರ ಇಮೇಜೇ ಚೆಂಜ್ ಆಯ್ತು. ಸಾಹೊ ಸಿನಿಮಾ ಹೇಳುವಷ್ಟರ ಮಟ್ಟಿಗೆ ಸಕ್ಸಸ್ ಕಾಣ್ಲಿಲ್ಲಾ ಆದ್ರೆ, ಆ ಸಿನಿಮಾಗೆ ಪ್ರಭಾಸ್ ಪಡೆದಿದ್ದು, ಬರೋಬ್ಬರಿ 100ಕೋಟಿ. ಸಾಹೊ ಸಿನಿಮಾದ ನಂತ್ರ ಪ್ರಭಾಸ್ ಕೈಯಲ್ಲಿ ಮೂರು ಸಿನಿಮಾಗಳಿದ್ದು, ಈ ಮೂರು ಸಿನಿಮಾಗಳು ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ ತಯಾರಾಗ್ತಿವೆ.
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ ಶ್ಯಾಮ್, ಸಿನಿಮಾ ಇನ್ನೇನು ಇಧೆ ಜುಲೈನಲ್ಲಿ ತೆರೆಗೆ ಬರೋದಕ್ಕೆ ರೆಡಿಯಾಗಿದೆ. ಇನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಓಂ ರಾವತ್ ನಿರ್ದೇಶನದ ಆದಿಪುರುಷ್ ಹಾಗೂ ನಿರ್ದೇಶಕ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದಲ್ಲೂ ಬಾಲಿವುಡ್ ನಟ, ನಟಿಯರ ಜೊತೆಗೆ ಪ್ರಭಾಸ್ ಅಭಿನಯಿಸಲಿದ್ದಾರೆ. ಒಟ್ನಲ್ಲಿ ಅದೇನೇ ಇರ್ಲಿ, ಪ್ರಭಾಸ್ ಒಂದು ಸಿನಿಮಾಗೆ ತೆಗೆದುಕೊಳ್ಳುವ 100ಕೋಟಿ ಸಂಭಾವನೆ ಮ್ಯಾಟರ್ ಮಾತ್ರ ಎಲ್ಲೆಲ್ಲೂ, ಎಲ್ಲರನ್ನು ಹೌಹಾರಿಸುತ್ತಿದೆ.