ಕೋಲಾರ: ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿರುವ ಘಟನೆ ಜರುಗಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಕೆರೆಯಲ್ಲಿ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಕ್ರೀತಿಖಾರಿಣಿ (17) ಮೃತ ಬಾಲಕಿಯಾಗಿದ್ದಾಳೆ.
ಕೆಜಿಎಫ್ ನ ಸೆಂಟ್ ಥೆರೆಸಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಬಾಲಕಿ ಕ್ರೀತಿಖಾರಣಿ ಮಾಡುತ್ತಿದ್ದಳು. ಎರಡು ದಿನದ ಹಿಂದೆ ಕಾಲೆಜಿಗೆ ಹೋದವಳು ಮನೆಗೆ ವಾಪಸ್ ಬರದೇ ಇದ್ದಾಗ ಎರಡು ಹಿಂದೆಯೇ ಬಾಲಕಿಯ ಪೋಷಕರು ಅಂಡರ್ಸನ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇಂದು ಕೆರೆ ದಡದಲ್ಲಿ ಬಾಲಕಿಯ ಬ್ಯಾಗ್ ಹಾಗೂ ಮೊಬೈಲ್ ಪತ್ತೆಯಾಗಿದೆ. ಇದೀಗ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಸ್ಥಳಕ್ಕೆ ಅಂಡರ್ಸನ್ ಪೋಲೀಸರು ಭೇಟಿ ನೀಡಿ ಶವವನ್ನು ನೀರಿನಿಂದ ಹೊರಕ್ಕೆ ತೆಗೆದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.