ಬಾಗಲಕೋಟೆ: ಬಿಗ್ ಬಾಸ್ ಸೀಸನ್ 6 ಸ್ಪರ್ಧಿ ಹಾಗೂ ಕಿರುತೆರೆ ನಟಿ ಸೋನು ಪಾಟೀಲ್ ಅವರ ತಾಯಿಯ ವೈದ್ಯಕೀಯ ಚಿಕಿತ್ಸೆಗೆ ನಟ ಕಿಚ್ಚ ಸುದೀಪ್ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಟಿ ಸೋನು ಪಾಟೀಲ್ ಅವರ ತಾಯಿ ಮಾದೇವಿ ಅವರಿಗೆ ನ್ಯೂಮೊನಿಯಾ ದಿಂದ ತೊಂದರೆಗೆ ಒಳಗಾಗಿದ್ದರು. ಇದರಿಂದ ಚಿಕಿತ್ಸೆಗೆ ಹಣ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣ ವಾಗಿತ್ತು. ಈ ಬಗ್ಗೆ ನಟ ಸುದೀಪ್ ಅವರ ಗಮನಕ್ಕೆ ಬಂದಾಗ, ಕಿಚ್ಚ ಚಾರಿಟೇಬಲ್ ಟ್ರಸ್ಟ್ ಮೂಲಕ ಹಣದ ಸಹಾಯ ಮಾಡಿದ ಮಾನವೀಯತೆ ನೆರೆದಿದ್ದಾರೆ.
ಆಸ್ಪತ್ರೆಯ ಎಲ್ಲ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ನಟ ಸುದೀಪ ಭರಿಸಿದ್ದಾರೆ. ಸುದೀಪ್ ನೆರವು ಮಾಡಿದ್ದರಿಂದ ಸೋನು ಪಾಟೀಲ್, ಕಣ್ಣೀರಿಟ್ಟು ಧನ್ಯವಾದ ಅರ್ಪಿಸಿದ್ದಾರೆ. ತಾಯಿಗೆ ನ್ಯೂಮೋನಿಯಾ ಹಿನ್ನೆಲೆಯಲ್ಲಿ ವಾರದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯ ಬಿಲ್ ಸೇರಿದಂತೆ ಇತರ ವೆಚ್ಚಕ್ಕಾಗಿ ಅಂದಾಜು 5 ಲಕ್ಷ ರೂಪಾಯಿಗಳ ವರೆಗೆ ನಟ ಸುದೀಪ್ ಸಹಾಯ ಮಾಡಿ ಗಮನ ಸೆಳೆಯುವಂತಾಗಿದೆ.