ನಟ ಉಪೇಂದ್ರ ಕೊರೊನಾ ಎರಡನೇ ಅಲೆಯ ಅಬ್ಬರದ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸಿದ ತರಕಾರಿಯನ್ನು ಸಿನಿ ಕಾರ್ಮಿಕರು ಹಾಗೂ ಜನರಿಗೆ ಉಚಿತವಾಗಿ ಹಂಚಿ ಮಾನವೀಯತೆ ಮೆರೆದಿದ್ದಾರೆ.
ಇತ್ತೀಚೆಗಷ್ಟೇ ಉಪೇಂದ್ರ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣಕ್ಕೆ ರಸ್ತೆಗೆ ಚೆಲ್ಲಿ ವ್ಯರ್ಥ ಮಾಡಬೇಡಿ. ಅದನ್ನು ತಮಗೆ ಕೊಡಿ ಸೂಕ್ತ ಬೆಲೆ ಕೊಟ್ಟು ನೀವು ಇರುವಲ್ಲಿಗೆ ಬಂದು ನಾವು ಖರೀದಿಸುತ್ತೇವೆ ಎಂದು ಮನವಿ ಮಾಡಿದ್ದರು.
ಈ ಮನವಿಯಂತೆ ರೈತರ ಬಳಿ ಖರೀದಿಸಿದ ತರಕಾರಿ ಜೊತೆಗೆ ಫುಡ್ ಕಿಟ್ ಅನ್ನು ಸಿನಿಮಾ ಕಾರ್ಮಿಕರು ಹಾಗೂ ಜನ ಸಾಮಾನ್ಯರಿಗೆ ತಮ್ಮ ಮನೆಯ ಸಮೀಪ ವಿತರಿಸಿದರು.
ಬೆಂಗಳೂರು ಸುತ್ತಮುತ್ತಲಿನ ರೈತರಿಗೆ ಬೆಂಬಲ ಬೆಲೆ ಕೊಟ್ಟು ಖರೀದಿಸಿದ ತರಕಾರಿಯನ್ನು ಉಪೇಂದ್ರ ಅಭಿಮಾನಿಗಳು ಉಚಿತವಾಗಿ ವಿತರಿಸಿದರು.