AGNIPATH – ಅಗ್ನಿಪಥ ಯೋಜನೆ ವಿರೋಧಿಸಿ ಬಿಹಾರದಲ್ಲಿ ರೈಲಿಗೆ ಬೆಂಕಿ – ಪರಿಸ್ಥಿತಿ ಉದ್ವಿಗ್ನ

ಕೇಂದ್ರ ಸರ್ಕಾರ (CENTRAL GOVERNMENT) ಘೋಷಿಸಿರುವ ಅಲ್ವಾವಧಿಯ ಸೇನಾ ನೇಮಕಾತಿ ಅಗ್ನಿಪಥ (AGNIPATH)ಯೋಜನೆ ವಿರೋಧಿಸಿ ಬಿಹಾರ, ಜಾರ್ಖಂಡ್ (Jharkhand) ಸೇರಿದಂತೆ ದೇಶದ ಹಲವೆಡೆ ಪ್ರತಿಭಟನೆ ಭುಗಿಲೆದ್ದಿದೆ.

ಬಿಹಾರದ (Bihar) ಚಾಪ್ರಾದಲ್ಲಿ ಪ್ರತಿಭಟನೆ ನಡೆಸಿದ ಯುವಕರು, ಟೈರ್ ಗೆ ಬೆಂಕಿ ಹಚ್ಚಿಗೆ ಆಕ್ರೋಶ ವ್ಯಕ್ತಪಡಿಸಿದರು. ಬಸ್ ವೊಂದನ್ನು ಧ್ವಂಸಗೊಳಿಸಿದರು. ಬಿಹಾರದಲ್ಲಿ ಉದ್ರಿಕ್ತರು ರೈಲಿಗೆ (TRAIN)ಬೆಂಕಿ ಹಚ್ಚಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ನಾವು ಕಷ್ಟಪಟ್ಟು ಸೇನೆ ಸೇರುತ್ತೇವೆ. ಕೆಲ ತಿಂಗಳು ತರಬೇತಿ ಮತ್ತು ರಜೆಯೊಂದಿಗೆ ಹೇಗೆ ನಾಲ್ಕು ವರ್ಷ ಸೇವೆ ಸಲ್ಲಿಸಲು ಸಾಧ್ಯ? ತರಬೇತಿ ಪಡೆದ ನಂತರ ಕೇವಲ ಮೂರು ವರ್ಷದಲ್ಲಿ ಹೇಗೆ ದೇಶ ರಕ್ಷಿಸಲು ಸಾಧ್ಯ?ಈ ಯೋಜನೆಯನ್ನು ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿಯೂ (RANCHI) ಪ್ರತಿಭಟನೆ ನಡೆಸಲಾಯಿತು. ಜೂನ್ 10 ರಂದು ಹಿಂಸಾಚಾರದ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಇದನ್ನೂ ಓದಿ : – EDಯಿಂದ ರಾಹುಲ್ ಗಾಂಧಿ ವಿಚಾರಣೆ – ನಾಳೆ ಕಾಂಗ್ರೆಸ್ ಮುಖಂಡರಿಂದ ರಾಜಭವನ ಮುತ್ತಿಗೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!