ಇಂದು ಭಾರತ ಕಾಂಗ್ರೆಸ್ (CONGRESS) ಮುಕ್ತವಾಗಿದೆ ಎಂದು ಚಾಮರಾಜನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Naleen Kumar Kateel) ತಿಳಿಸಿದ್ದಾರೆ.
ವಿರೋಧ ಪಕ್ಷವಾಗಿರುವುದಕ್ಕೂ ನಾಲಾಯಕ್ಕಾಗಿರುವ ಪಕ್ಷ ಕಾಂಗ್ರೆಸ್. ಇಂದು ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಗುಡುಗಿದ್ದಾರೆ. ಅವರೇ ಅಧಿಕಾರದಲ್ಲಿದ್ದ ಪಂಜಾಬ್ ನ್ನು ಮತ್ತೆ ಹಿಡಿಯೋದಕ್ಕೆ ಆಗಲಿಲ್ಲ. ಇಂತಹ ಸ್ಥಿತಿಯಲ್ಲಿ ಇರುವ ಕಾಂಗ್ರೆಸ್ ಗೆ ಕೇಡುಗಾಲ ಎಂಬುದು ಮನದಟ್ಟಾಗಿದೆ. ಹಿಂದೆ ತುರ್ತು ಪರಿಸ್ಥಿತಿ (EMERJENCY)ಹೇರಿ ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಗುಡುಗಿದ್ದಾರೆ. ಸಿದ್ದರಾಮಯ್ಯ (Siddaramaiah) ಇಡಿ ಗೆ ವಿರುದ್ದವಾದ ನಡವಳಿಕೆ ತೋರಿಸುತ್ತಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ. ಇದನ್ನೂ ಓದಿ : – ಗುಬ್ಬಿಯಲ್ಲಿ ಡಿಎಸ್ ಎಸ್ ಮುಖಂಡ ಬರ್ಬರ ಹತ್ಯೆ – ಪೊಲೀಸರಿಂದ ತನಿಖೆ ಚುರುಕು