ಫುಟ್ ಪಾತ್ ಮೇಲೆ ಕೋವಿಡ್ ನಿಂದ ಮೃತಟ್ಟಿದ್ದ ಶವವನ್ನು ಎಸೆದು ಅಮಾನವೀಯವಾಗಿ ವರ್ತಿಸಿದ್ದ ಅಂಬುಲೆನ್ಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಂಬುಲೆನ್ಸ್ ಚಾಲಕ ಶರತ್ ಗೌಡ ಬಂಧಿಸಲಾಗಿದ್ದು, ಮತ್ತೊಬ್ಬ ನಾಗೇಶ್ ಗಾಗಿ ಶೋಧ ಕಾರ್ಯ ನಡೆದಿದೆ.
ಬೆಂಗಳೂರಿನ ಹೆಬ್ಬಾಳ ಚಿತಾಗಾರದ ಬಳಿ ನಡೆದಿದ್ದ ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಕೊವೀಡ್ ಗೆ ಬಲಿಯಾಗಿದ್ದ ಅನೂಜ್ ಸಿಂಗ್ ಅವರ ಶವವನ್ನು ಅಸ್ಪತ್ರೆಯಿಂದ ಚಿತಾಗಾರ ಬಳಿಗೆ ಕೊಂಡೊಯ್ಯಲು 18 ಸಾವಿರ ನೀಡಬೇಕು ಎಂದು ಮೃತನ ಪತ್ನಿ ಬಳಿ ಶರತ್ ಗೌಡ ಡಿಮ್ಯಾಂಡ್ ಮಾಡಿದ್ದ.
ಈ ವೇಳೆ 3 ಸಾವಿರ ಹಣ ಇದ್ದು, ಉಳಿದ ಹಣವನ್ನು ಚಿತಾಗಾರದ ಬಳಿ ಅಡ್ಜೆಸ್ಟ್ ಮಾಡಿ ಕೊಡುವುದಾಗಿ ಮಹಿಳೆ ಹೇಳಿದ್ದರು. ಚಿತಾಗಾರದ ಬಳಿ ಬರುತ್ತಿದ್ದಂತೆ ಉಳಿದ ಹಣ ಕೊಡುವಂತೆ ಅಂಬ್ಯುಲೆನ್ಸ್ ಚಾಲಕನ ಗಲಾಟೆ ಮಾಡಿದ್ದಾನೆ.
ಕೈಯಲ್ಲಿ ಹಣವಿಲ್ಲದೆ ಸ್ವಲ್ಪ ಹೊತ್ತು ಅಡ್ಜೆಸ್ಟ್ ಮಾಡಿ ಕೊಡುತ್ತೇನೆ ಎಂದು ಮಹಿಳೆ ಅಂಗಲಾಚಿದರೂ ಕೇಳದ ಚಾಲಕ ಶರತ್ ಗೌಡ, ಶವವನ್ನ ರಸ್ತೆ ಬದಿಯ ಪುಟ್ ಪಾತ್ ಮೇಲೆ ಇಳಿಸಿ ಪರಾರಿಯಾಗಿದ್ದ.
ಹೆಬ್ಬಾಳ ಚಿತಾಗಾರ ಉಸ್ತುವಾರಿವಾರಿಯಿಂದ ದೂರು ಪಡೆದಿದ್ದ ಅಮೃತಹಳ್ಳಿ ಪೊಲೀಸರು ಚಾಲಕ ಶರತ್ ಗೌಡನನ್ನು ಬಂಧಿಸಿದ್ದಾರೆ.