ಬಿಎಂಟಿಸಿ, ಟೆಂಪೋ ನಡುವೆ ಸಿಲುಕಿದ ಆಟೋ

ಮೈಸೂರು ರಸ್ತೆನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಬಿಎಂಟಿಸಿ ಹಾಗೂ ಟೆಂಪೋ ನಡುವೆ ಆಟೋ ಸಿಲುಕಿಕೊಂಡಿದೆ. ಇಂದು ಮುಂಜಾನೆ ಮೈಸೂರು ರಸ್ತೆಯ ಸ್ಯಾಟ್ ಲೈಟ್ ನಿಲ್ದಾಣದ ಬಳಿ ಕ್ಯಾಂಟರ್, ಟೆಂಪೋ, ಬಿಎಂಟಿಸಿ ಬಸ್ ಹಾಗೂ ಆಟೋ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಈ ಅಪಘಾತದಲ್ಲಿ ಬಿಎಂಟಿಸಿ ಹಾಗೂ ಟೆಂಪೋ ನಡುವೆ ಆಟೋ ಸಿಲುಕಿದೆ. ಸರಣಿ ಅಪಘಾತದಲ್ಲಿ ಸಿಲುಕಿದ ಆಟೋ ಸಂಪೂರ್ಣ ಜಖಂ ಆಗಿದ್ದು, ಸ್ಥಳೀಯರು ಆಟೋ ಚಾಲಕನ ರಕ್ಷಣೆಗೆ ಹರಸಾಹಸ ಪಟ್ಟಿದ್ದಾರೆ. ಅರ್ಧಗಂಟೆಗಳ ಕಾಲ ಹರಸಾಹಸದ ಬಳಿಕ ಆಟೋ ಚಾಲಕನನ್ನು ಹೊರತೆಗೆಯಲಾಗಿದೆ. ಗಂಭೀರಗಾಯಗೊಂಡ ಆಟೋ ಚಾಲಕನನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಅಪಘಾತವಾದ 4 ವಾಹನಗಳನ್ನು ತೆರವು ಮಾಡುತ್ತಿದ್ದಾರೆ. ನಡುರಸ್ತೆಯಲ್ಲಿ ಅಪಘಾತ ಆಗಿದ್ದು, ಮೈಸೂರು ರೋಡ್ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಇದನ್ನೂ ಓದಿ : –  ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!