ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಇಂದು ಮತದಾನ

ರಾಜ್ಯಸಭೆ ಚುನಾವಣೆ ಬಳಿಕ ಇದೀಗ ಮತ್ತೊಂದು ಚುನಾವಣೆ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಸಿಎಂ ಬೊಮ್ಮಾಯಿಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಇಂದು ಶಿಕ್ಷಕ ಮತ್ತು ಪದವೀಧರರ ಕ್ಷೇತ್ರಕ್ಕೆ ಮತದಾನ ನಡೆಯಲಿದೆ.

ದಕ್ಷಿಣ ಪದವೀಧರ ಕ್ಷೇತ್ರವಾದ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ವಾಯವ್ಯ ಪದವೀಧರ ಕ್ಷೇತ್ರವಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರವಾದ ಧಾರವಾಡ, ಹಾವೇರಿ, ಗದಗದಲ್ಲಿ ಚುನಾವಣೆ ನಡೆಯಲಿದೆ. ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಅಖಾಡದಲ್ಲಿ 49 ಅಭ್ಯರ್ಥಿಗಳಿದ್ದಾರೆ. ಇದನ್ನೂ ಓದಿ : – ರಾಹುಲ್ ಗಾಂಧಿಗೆ ತಾಕತ್ತು ಇದ್ರೆ ಸಿದ್ದರಾಮಯ್ಯನನ್ನು ವಿರೋಧ ಪಕ್ಷದ ನಾಯಕನ ಸ್ಧಾನದಿಂದ ಇಳಿಸಿ – ಸಿಎಂ ಇಬ್ರಾಹಿಂ

ದಕ್ಷಿಣ ಪದವೀಧರ ಕ್ಷೇತದ ಇತಿಹಾಸದಲ್ಲಿ ಯಾವತ್ತೂ ಕಾಂಗ್ರೆಸ್ ಗೆದ್ದಿಲ್ಲ. ಹೀಗಾಗಿ, ಕಾಂಗ್ರೆಸ್ ಗೆಲುವಿಗಾಗಿ ರಣ ತಂತ್ರ ರೂಪಿಸಿದ್ದರೆ, ಜೆಡಿಎಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಬಿಜೆಪಿ ಮರಳಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳಲು ಪ್ರಯತ್ನಿಸುತ್ತಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿಗೆ ಭವಿಷ್ಯದ ಪ್ರಶ್ನೆ ಆಗಿದೆ. ಇಲ್ಲಿ ಕಾಂಗ್ರೆಸ್, ಜೆಡಿಎಸ್ ಸಹ ಟಫ್ ಫೈಟ್ ಕೊಡ್ತಿವೆ.

ಇದನ್ನೂ ಓದಿ : – ಯೋಗದಲ್ಲೂ ರಾಜಕಾರಣ – ಪ್ರತಾಪ್ ಸಿಂಹ, ರಾಮದಾಸ್ ನಡುವೆ ಪೈಪೋಟಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!