ನೆಲಮಂಗಲ: ದ್ವಿಚಕ್ರ ವಾಹನದಲ್ಲಿ ವ್ಹೀಲಿಂಗ್ ಮಾಡಿದ್ದ ಪುಂಡರು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿ, ಇದೀಗ ಪೊಲೀಸರ ಅತಿಥಿ ಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಂಚಾರಿ ಪೊಲೀಸರು ಈ ಯುವಕರ ಬ್ರೇಕ್ ಹಾಕಿದ್ದಾರೆ.
ಇನ್ನೂ ರಾಷ್ಟ್ರೀಯ ಹೆದ್ದಾರಿ 75 ರ ಶಾಂತಿನಗರ ಬಳಿ ವ್ಹೀಲಿಂಗ್ ಮಾಡಿ, ಭಯಾನಕ ವ್ಹೀಲಿಂಗ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಯುವಕರು ತಂಡಕ್ಕೆ ಪೊಲೀಸರು ಕಾನೂನು ಪಾಠ ಹೇಳಿದ್ದಾರೆ. ವ್ಹೀಲಿಂಗ್ ಜೊತೆಗೆ ಹಿಂಬದಿ ಸವಾರರ ಪ್ರಾಣದ ಜೊತೆ ಚೆಲ್ಲಾಟವನ್ನು ಈ ಪುಂಡರು ಆಡಿದ್ದಾರೆ.
ನಾಲ್ಕು ಜನ ಯುವಕರನ್ನು ವಶಕ್ಕೆ ಪಡೆದ ನೆಲಮಂಗಲ ಸಂಚಾರಿ ಪೊಲೀಸರು ವಶಕ್ಕೆ ಪಡೆದು, ಆರೋಪಿಗಳಾದ ದರ್ಶನ್, ಶ್ರೀನಿವಾಸ್ ಪಳನಿ ಮತ್ತು ಎರಡು ಬೈಕ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.