ಬೇಸಿಗೆಯ ಬಿಸಿಲಿನ ನಂತರ ನಗರದಲ್ಲಿ ನಿನ್ನೆ ಸುರಿದ ಮಳೆ ಭಾರಿ ಅವಾಂತರವನ್ನೇ ಸೃಷ್ಟಿಸಿತು. ಹಲವು ಭಾಗಗಳು ಜಲಾವೃತಗೊಂಡು ಸವಾರರು ಹರಸಾಹಸಪಡುವಂತಾಯಿತು.
ಭಾನುವಾರ ಸಂಜೆ 4-30 ರಿಂದ ಆರಂಭವಾದ ಮಳೆ ಸಂಜೆ 7 ಗಂಟೆಯವರೆಗೂ ಎಡೆಬಿಡದೆ ಸುರಿದ ಹಿನ್ನೆಲೆಯಲ್ಲಿ ಪ್ರಯಾಣಿಕರ ಪಾಡು ಹೇಳತೀರದಂತಾಯಿತು. ಇದನ್ನೂ ಓದಿ :- ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ MES ಪುಂಡಾಟ
ವರುಣನ ಆರ್ಭಟ ಇಂದು ಕೂಡಾ ಮುಂದುವರೆಯುವ ಸಾಧ್ಯತೆಯಿದೆ. ಬೆಂಗಳೂರು ನಗರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಮುಂದಿನ ಎರಡು ದಿನ ಮಳೆಯಾಗುವ ಸಾಧ್ಯತೆಯಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ :- ಕೋಲಾರದಲ್ಲಿ ಶುರುವಾದ ಅಕಾಲಿಕ ಮಳೆ – ರೈತರ ಮೊಗದಲ್ಲಿ ಮಂದಹಾಸ