ಮುಂಬೈ: ಭಾರತೀಯ ಕ್ರಿಕೆಟ್ ಟೀಂನ ವಾರ್ಷಿಕ ವೇತನ ಶ್ರೇಣಿಯನ್ನು ಬಿಸಿಸಿಐ ಪ್ರಕಟಿಸಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಎ ಪ್ಲಸ್ ಗ್ರೇಡ್ ಉಳಿಸಿಕೊಂಡಿದ್ದಾರೆ. ಈ ಮೂವರೂ ತಲಾ 7ಕೋಟಿ ರೂ. ಮೌಲ್ಯದ ವೇತನ ಶ್ರೇಣಿ ಪಡೆಯಲಿದ್ದಾರೆ. ಅಕ್ಟೋಬರ್ 2020ರಿಂದ ಸೆಪ್ಟೆಂಬರ್ 2021ರವರೆಗಿನ ವೇತನ ಶ್ರೇಣಿ ಇದಾಗಿದೆ. ಬಿಸಿಸಿಐನ ಗುತ್ತಿಗೆ ಪಟ್ಟಿಯಲ್ಲಿ ಒಟ್ಟು 28 ಆಟಗಾರರು ಸ್ಥಾನ ಪಡೆದಿದ್ದಾರೆ. ಈ ವೇತನ ಶ್ರೇಣಿಯ ಪ್ರಕಾರ A+ ಗ್ರೇಡ್‌ನ ಆಟಗಾರರು 7 ಕೋಟಿ ರೂ., A ಗ್ರೇಡ್‌ನ ಆಟಗಾರರು 5 ಕೋಟಿ ರೂ., B ಗ್ರೇಡ್ ಆಟಗಾರರು 3 ಕೋಟಿ ರೂ. ಮತ್ತು C ಗ್ರೇಡ್ ಆಟಗಾರರು 1 ಕೋಟಿ ರೂ. ವಾರ್ಷಿಕ ವೇತನ ಪಡೆಯಲಿದ್ದಾರೆ.
A+ ಗ್ರೇಡ್‌ನ ಆಟಗಾರರು
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ
A ಗ್ರೇಡ್‌ನ ಆಟಗಾರರು
ಆರ್ ಅಶ್ವಿನ್, ರವೀಂದ್ರ ಜಡೇಜಾ, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಶಿಖರ್ ಧವನ್, ಕೆಎಲ್ ರಾಹುಲ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ.
B ಗ್ರೇಡ್ ಆಟಗಾರರು
ವೃದ್ಧಿಮಾನ್ ಸಾಹ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮಯಾಂಕ್ ಅಗರ್ವಾಲ್.
C ಗ್ರೇಡ್ ಆಟಗಾರರು
ಕುಲದೀಪ್ ಯಾದವ್, ನವದೀಪ್ ಸೈನಿ, ದೀಪಕ್ ಚಾಹರ್, ಶುಬ್ಮನ್ ಗಿಲ್, ಹನುಮ ವಿಹಾರಿ, ಅಕ್ಷರ್ ಪಟೇಲ್, ಶ್ರೇಯಸ್ ಐಯ್ಯರ್, ವಾಷಿಂಗ್ಟನ್ ಸುಂದರ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.