ವಾಷಿಂಗ್ಟನ್: ನಾಸಾ ಮಿಲ್ಕೀ ವೇ ಗೆಲಾಕ್ಸಿಯ ಫೋಟೋವೊಂದನ್ನು ಬಿಡುಗಡೆ ಮಾಡಿದೆ. ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲಾದ ಮಿಲ್ಕಿ ವೇ ಗೆಲಾಕ್ಸಿಯ ಚಿತ್ರವನ್ನು ನಾಸಾ ತನ್ನ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಫೊಟೋ ಸದ್ಯ ಲಕ್ಷಾಂತರ ಮಂದಿಯ ಮೆಚ್ಚುಗೆ ಪಡೆದಿದೆ. ನಾವು ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಸೆರೆಹಿಡಿಯಲ್ಪಟ್ಟ ಮಿಲ್ಕಿ ವೇ ಗ್ಯಾಲಕ್ಸಿಯ ಚಿತ್ರವನ್ನು ಇಲ್ಲಿ ಹಂಚಿಕೊಂಡಿದ್ದೇವೆ. ಈ ಚಿತ್ರ ಎಲ್ಲವನ್ನೂ ವರ್ಣಿಸುತ್ತದೆ. ನಾವು ವಾಸಿಸುವ ಭೂಮಿಯೂ ಇದೇ ಮಿಲ್ಕಿ ವೇ ನಲ್ಲಿದೆ. ಎಂದು ನಾಸಾ ಅಡಿ ಟಿಪ್ಪಣಿಯೊಂದಿಗೆ ಈ ಚಿತ್ರವನ್ನು ನಾಸಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಮಿಲ್ಕೀ ವೇ ಗೆ ಕ್ಷೀರಪಥ ಅಥವಾ ಆಕಾಶ ಗಂಗೆ ಎಂತಲೂ ಕರೆಯಲಾಗುತ್ತದೆ. ಆಕಾಶದಿಂದ ಭೂಮಿಗೆ ಗಂಗಾಮಾತೆ ಇಳಿದ ರೀತಿ ಇದೆಂದು ಪ್ರಾಚೀನ ಭಾರತೀಯರು ಭಾವಿಸಿದ್ದರು. ಮಿಲ್ಕೀ ವೇ ನಲ್ಲಿ ಭೂಮಿಯಂತೆ ಸುಮಾರು 30 ಕೋಟಿಗೂ ಅಧಿಕ ಪ್ರಪಂಚಗಳು ಇವೆ. ಅಲ್ಲದೇ ಇಡೀ ಆಕಾಶ ಗಂಗೆ ಗ್ಯಾಲಕ್ಸಿಯಲ್ಲಿ ಅರ್ಧಕ್ಕರ್ಧ ಸೂರ್ಯನಂಥ ನಕ್ಷತ್ರಗಳು ಇವೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದು ಈ ಬಗ್ಗೆ ಸಂಶೋಧನೆಗಳು ನಡೆದಿವೆ ಎನ್ನಲಾಗಿದೆ.