ಬೆಂಗಳೂರು: ಕರ್ಜೂರ ನೈಸರ್ಗಿಕವಾಗಿಯೇ ಅತ್ಯಂತ ಸಿಹಿ ಅಂಶದಿಂದ ಕೂಡಿರುವ ಈ ಹಣ್ಣು ಎಲ್ಲರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ರ್ಜೂರ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಉತ್ತುತ್ತಿ ಹಣ್ಣು ಎಂದು ಕರೆಯುವ ಈ ಹಣ್ಣು ನೂರಾರು ವರ್ಷಗಳಿಂದ ನಮ್ಮ ಹಿರಿಯರು ಈ ಹಣ್ಣನ್ನು ತಿನ್ನುತ್ತಿದ್ದಾರೆ. ಕರ್ಜೂರವನ್ನು ನಿಯಮಿತವಾಗಿ ಸೇವಿಸುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು.
ಅತಿಹೆಚ್ಚು ನಾರಿನಂಶವನ್ನು ಒಳಗೊಂಡಿರುವ ಈ ಹಣ್ಣು ಜೀರ್ಣಾಂಗ ವ್ಯವಸ್ಥೆ ಹಾಗೂ ಕರುಳುಗಳು ಕ್ರಮಬದ್ಧವಾದ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಪ್ರತಿದಿನ ಕೇವಲ ಮೂರು ಖರ್ಜೂರವನ್ನು ತಿಂದರೆ ಸಾಕು. ದೇಹಕ್ಕೆ ಅಗತ್ಯವಾದ ಜೀವಸತ್ವ, ವಿಟಮಿನ್ ಹಾಗೂ ನಾರಿನಂಶವನ್ನು ಒದಗಿಸುತ್ತದೆ.
ಪ್ರತಿದಿನ ಕೇವಲ ಮೂರು ಖರ್ಜೂರವನ್ನು ತಿಂದರೆ ಮಲಬದ್ಧತೆ, ಕರುಳಿನ ಅಸ್ವಸ್ಥತೆ, ಹೃದಯದ ತೊಂದರೆ, ಅತಿಸಾರದಂಥ ತೊಂದರೆಗಳು ನಿವಾರಣೆಯಾಗುತ್ತವೆ.
ಸತತ ಒಂದು ವಾರಗಳ ಕಾಲ ಪ್ರತಿದಿನ ಮೂರು ಕರ್ಜೂರ ತಿನ್ನುವುದರಿಂದ ಮೂಳೆಗಳು ಬಲ ಪಡೆಯುತ್ತವೆ.ಇದರಲ್ಲಿರುವ ನೈಸರ್ಗಿಕ ಸಕ್ಕರೆ ಅಂಶವು ದೇಹಕ್ಕೆ ಶಕ್ತಿ ನೀಡುತ್ತದೆ.
ರಕ್ತಹೀನತೆಯಿಂದ ಬಳಲುತ್ತಿದ್ದವರು ಪ್ರತಿದಿನ ಖರ್ಜೂರವನ್ನು ತಿಂದರೆ ಸಮಸ್ಯೆ ಗುಣಮುಖವಾಗುತ್ತದೆ. ಪ್ರತಿ 100 ಗ್ರಾಂ ಖರ್ಜೂರದಲ್ಲಿ 0.90 ಗ್ರಾಂ ಕಬ್ಬಿಣಾಂಶ ಇದೆ. ಕೆಂಪು ರಕ್ತದ ಪ್ರಮಾಣವನ್ನು ಹೆಚ್ಚಿಸಿ ರಕ್ತಹೀನತೆಯಿಂದ ಪಾರಾಗಬಹುದು.
ಖರ್ಜೂರದಲ್ಲಿ ರಂಜಕವು ಸಮೃದ್ಧವಾಗಿರುತ್ತದೆ ಹಾಗಾಗಿ ಇದು ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಪ್ರತಿದಿನ ಎರಡರಿಂದ ಮೂರು ಖರ್ಜೂರವನ್ನು ತಿನ್ನುವುದನ್ನು ರೂಡಿಸಿಕೊಂಡರೆ ಕೂದಲ ಬುಡ ದೃಢ ವಾಗುವಂತೆ ನೋಡಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಬಿ ಕೂದಲಿನ ಬುಡಕ್ಕೆ ಹೆಚ್ಚಿನ ಪೋಷಣೆಯನ್ನು ನೀಡುವ ಮೂಲಕ ಕೂದಲು ಉದುರುವ ಸಮಸ್ಯೆಯನ್ನು ಸಹ ನಿವಾರಣೆ ಮಾಡಿಕೊಳ್ಳಬಹುದು.