ವರದಿ : ಧನು ಯಲಗಚ್
ಬೆಂಗಳೂರು: ಮೋಸ್ಟ್ ಅವೈಟೆಡ್ ಯುವರತ್ನ ಸಿನಿಮಾವನ್ನ ತೆರೆಮೇಲೆ ನೋಡ್ಬೇಕು ಅಂತಾ ಎರಡು ವರ್ಷಗಳಿಂದ ಕಾದು ಕುಳಿತಿದ್ದ ಅಭಿಮಾನಿಗಳ ಆಸೆ ಈಡೇರುವ ಸಮಯ ಬಂದಿದೆ. ಹೀಗಾಗಿ ಥಿಯೇಟರ್ ಮುಂದೆ ನೂರಾರು ಅಡಿಯ ಕಟೌಟ್‍ಗಳು ರಾರಾಜಿಸ್ತಿವೆ.
ನಗರದ ನರ್ತಕಿ ಚಿತ್ರಮಂದಿರದ ಮುಂದೆ 72ಅಡಿ ಎತ್ತರದ ಕಟೌಟ್ ಹಾಕಲಾಗಿದ್ದು, ಅಭಿಮಾನಿಗಳನ್ನ ಕೈಬೀಸಿ ಕರಿತಿವೆ ಯುವರತ್ನ ಕಟೌಟ್ಸ್.
ರಾಜ್ಯದ ಮೂಲೆ ಮೂಲೆಗಳಲ್ಲೂ ಸುಮಾರು 50 ಕಟೌಟ್ ತಯಾರಿಸಿ ಕಳುಸಿದ್ದಾರೆ ಕಟೌಟ್ ಕೃಷ್ಣ ಅವ್ರು. ಬೆಂಗಳೂರಿನಲ್ಲಷ್ಟೇ ಸುಮಾರು 13ಕಟೌಟ್ ಕಟ್ಟಲಾಗಿದ್ದು, ಯುವರತ್ನನ ದರ್ಶನಕ್ಕೆ ಅಪ್ಪು ಭಕ್ತಗಣ ಕಾಯ್ತಿದೆ. ಈಗಾಗ್ಲೇ ಚಿತ್ರದ ಟ್ರೈಲರ್, ಸಾಂಗ್ಸ್ ಮೂಲಕ ಸೌಂಡ್ ಮಾಡಿರೋ ಯುವರತ್ನ ಥಿಯೇಟರ್ಗೆ ಲಗ್ಗೆ ಇಡ್ತಿದೆ.
ಬಹುತಾರಾಗಣ ಹೊಂದಿರೋ ಯುವರತ್ನ ಸಿನಿಮಾ ಈಗಾಗ್ಲೇ ರಿಲೀಸ್‍ಗೂ ಮೊದ್ಲೆ ಕರ್ನಾಟಕದ ಮೂಲೆ ಮೂಲೆಗೂ ಸಂಚರಿಸಿ ಯುವರತ್ನ ಸಂಭ್ರಮಿಸೋದ್ರ ಜೊತೆಗೆ ಅಭಿಮಾನಿ ದೇವ್ರುಗಳನ್ನ ಮೀಟ್ ಮಾಡಿದ್ದಾರೆ ಅಪ್ಪು. ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವರತ್ನ ಸಿನಿಮಾ ಕ್ಲಾಸ್‍ಗೂ ಸೈ, ಮಾಸ್‍ಗೂ ಸೈ. ಈ ಬಾರಿ ಅಪ್ಪು ಪವರ್ ಆಫ್ ಯುತ್ ಅಂತಾ ಪವರ್‍ಫುಲ್ ಆಗಿ ಡ್ಯಾನ್ಸ್ ಮಾಡಿ ಫ್ಯಾನ್ಸ್ ಕ್ರೇಜ್ ಜಾಸ್ತಿ ಮಾಡಿದ್ದಾರೆ.
ಹಾಡುಗಳು ಹಾಗೂ ಟ್ರೈಲರ್ ಮೂಲಕ ಕಮಾಲ್ ಮಾಡಿ ಪವರ್‍ಸ್ಟಾರ್ ಅಭಿಮಾನಿಗಳ ಮುಂದೆ ದರ್ಶನ ಕೊಡೋದೊಂದೆ ಬಾಕಿ. ಬೆಳ್ಳಿತೆರೆಮೇಲೆ ತಮ್ಮ ನೆಚ್ಚಿನ ನಟನನ್ನ ನೋಡೋಕು ಕೂಡಾ ತುದಿಗಾಲಿನಲ್ಲಿ ನಿಂತು ಕಾಯ್ತಿದ್ದಾರೆ. ಈಗಾಗ್ಲೇ ಆನ್‍ಲೈನ್‍ನಲ್ಲಿ ಚಿತ್ರದ ಟಿಕೆಟ್ ಕೂಡಾ ಅವಲೇಬಲ್ ಇದ್ದು ಯುವಸಂಭ್ರಮಕ್ಕೆ ಫ್ಯಾನ್ಸ್ ರೆಡಿ.