ವಿಧಾನಸಭಾ ಚುನಾವಣೆ ನಂತರ ಪಶ್ಚಿಮ ಬಂಗಾಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಬಿಜೆಪಿಯ 77 ಶಾಸಕರಿಗೂ ಕೇಂದ್ರ ಸರಕಾರದ ಭದ್ರತೆ ನೀಡಲಾಗಿದೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಚುನಾವಣೆಯಲ್ಲಿ ಆಯ್ಕೆಯಾದ ನೂತನ 77 ಬಿಜೆಪಿ ಶಾಸಕರಿಗೆ ಅಪಾಯವಿದೆ ಎಂಬ ಕೇಂದ್ರ ಸರಕಾರದ ಭದ್ರತಾ ಪಡೆಗಳ ಸೂಚನೆ ಮೇರೆಗೆ ಭದ್ರತೆ ಒದಗಿಸಲಾಗಿದೆ.
ಸಿಐಎಸ್ಎಫ್ ಮತ್ತು ಸಿಆರ್ ಪಿಎಫ್ ಕಾಮೊಂಡೋ ನೇತೃತ್ವದ ಭದ್ರತೆ ಒದಗಿಸಲಾಗುವುದು. 61 ಶಾಸಕರಿಗೆ ವೈ ಮತ್ತು ಪ್ರತಿಪಕ್ಷ ನಾಯಕ ಸುವೇಂದ್ರು ಅಧಿಕಾರಿ ಸೇರಿದಂತೆ ಉಳಿದ ಹಿರಿಯ ಶಾಸಕರಿಗೆ ಜೆಡ್ ಭದ್ರತೆ ನೀಡಲಾಗುವುದು ಎಂದು ಕೇಂದ್ರ ಸರಕಾರದ ಗೃಹ ಸಚಿವಾಲಯ ತಿಳಿಸಿದೆ.
ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಚುನಾವಣೆಯಲ್ಲಿ 274 ಸ್ಥಾನಗಳ ಪೈಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ 213 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು.