ಕನ್ನಡದ ಜನಪ್ರಿಯ ಬಿಗ್ ಬಾಸ್ ರಿಯಾಲಿಟಿ ಶೋ ಗೂ ಕೊರೊನಾ ಸಂಕಟ ಎದುರಾಗಿದ್ದು, ನಾಳೆಯಿಂದ ಬಿಗ್ ಬಾಗ್-8 ರಿಯಾಲಿಟಿ ಶೋ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ಕೊರೊನಾ ಎರಡನೇ ಅಲೆ ಭೀಕರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಶನಿವಾರ ಫೇಸ್ ಬುಕ್ ಲೈವ್ ನಲ್ಲಿ ಘೋಷಿಸಿದ್ದಾರೆ.
ಕೊರೊನಾ ಭೀತಿ ಹಾಗೂ ರಾಜ್ಯ ಸರಕಾರದ ಮಾರ್ಗಸೂಚಿ ಅನ್ವಯ ಯಾವುದೇ ಚಿತ್ರೀಕರಣ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕಲರ್ಸ್ ಕನ್ನಡಕ್ಕೆ ಸೂಚಿಸಿತ್ತು.
ಈಗಾಗಲೇ ಕಿಚ್ಚ ಸುದೀಪ್ ಅನಾರೋಗ್ಯದ ಕಾರಣ ಮೂರು ವಾರಗಳಿಂದ ಬಿಗ್ ಬಾಸ್ ಪರದ ಮೇಲೆ ಕಾಣಿಸಿಕೊಂಡಿಲ್ಲ. ಕೆಲವು ದಿನಗಳ ಹಿಂದೆಯಷ್ಟೇ ಧ್ವನಿ ಮಾತ್ರ ಕೇಳಿಸಲಾಗಿತ್ತು. ಅಲ್ಲದೇ ಅಸ್ವಸ್ಥಗೊಂಡಿದ್ದ ದಿವ್ಯಾ ಉರುಡುಗ ಅವರನ್ನು ಶೋ ಮಧ್ಯದಲ್ಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.