ಬಳ್ಳಾರಿ: ಅಕ್ರಮವಾಗಿ ಸಂಗ್ರಹಿಸಿದ್ದ ರೆಮ್ ಡಿಸಿವರ್ ಲಸಿಕೆಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಳ್ಳಾರಿ ಪೊಲೀಸರು ಬಂಧಿಸಲಾಗಿದೆ.
ರೆಮ್ ಡಿಸಿವರ್ ಬ್ಲಾಕ್ ದಂಧೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಅನ್ವಯ ದಾಳಿ ನಡೆಸಿ ಆರು ಡೋಸ್ ರೆಮ್ ಡಿಸಿವರ್ ಲಸಿಕೆ ವಶಪಡಿಸಿಕೊಳ್ಳಲಾಗಿದೆ.
ರೆಮ್ ಡಿಸಿವರ್ ಬ್ಲಾಕ್ ದಂಧೆ ನಡೆಸುತ್ತಿದ್ದ ಕಿಶೋರ್ ಕುಮಾರ್ ನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಇಲಾಖೆಯ ತಂಡದೊಂದಿಗೆ ದಾಳಿ ಮಾಡಿದಾಗ 3 ರಿಂದ 4 ಸಾವಿರ ಇರುವ ರೆಮ್ ಡಿಸಿವರ್ ಲಸಿಕೆಯ ಒಂದು ಡೋಸ್ ಲಸಿಕೆಗೆ 25ರಿಂದ 30ಸಾವಿರದಂತೆ ಮಾರಾಟ ಮಾಡುತ್ತಿದ್ದರು. ಆರು ಡೋಸ್ ಲಸಿಕೆಗೆ ಒಂದುವರೆ ಲಕ್ಷದವರೆಗೂ ಪಡೆದು ಲಸಿಕೆ ನೀಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿತ್ತು.
ಮಾಹಿತಿ ಅನ್ವಯ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಯ ಹಿಂದೆ ಹಲವು ಜನರು ಇರುವ ಶಂಕೆ ಇದ್ದು ಉಳಿದವರ ಪತ್ತೆಗೆ ಮುಂದಾಗಿದ್ದಾರೆ.