ಬೆಂಗಳೂರಿನ ಜೆಪಿ ಭವನದಲ್ಲಿ ಗಂಗಾ ಮಾತೆಯ ಬ್ರಹ್ಮ ಕಳಸ ಪ್ರತಿಷ್ಠಾಪನೆ- ಕುಮಾರಸ್ವಾಮಿ ವಿಶೇಷಪೂಜೆ

ಜನತಾ ಜಲಧಾರೆ ಗಂಗಾ ರಥಯಾತ್ರೆ ( Ganga yatra ) ಅಂಗವಾಗಿ ರಾಜ್ಯದ ಎಲ್ಲ ಜೀವನದಿ ಹಾಗೂ ಉಪ ನದಿಗಳಿಂದ ಸಂಗ್ರಹ ಮಾಡಿದ ಪವಿತ್ರ ಗಂಗಾ ಜಲದ ಕಳಸ(kalasa ) ಪ್ರತಿಷ್ಠಾಪನೆಯ ಮಹಾ ಪೂಜೆ ಹಾಗೂ ಕಳಸ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿತು.

ಜೆಡಿಎಸ್ (jds ) ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇರಿಸಿರುವ ಬೃಹತ್ ಬ್ರಹ್ಮ ಕಳಸಕ್ಕೆ ಪಂಡಿತ ಡಾ ಭಾನು ಪ್ರಕಾಶ್ ಶರ್ಮಾ ( dr. bhanu prakash sharma ) ನೇತೃತ್ವದ ಪಂಡಿತರ ತಂಡದಿಂದ ಪೂಜಾ ಕೈಂಕರ್ಯ ಜರುಗಿತು.10 ಅಡಿಯ ಎತ್ತರದ 500 ಲೀಟರ್ ಜಲ ತುಂಬಲಿರುವ ಕಳಸವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಬೆಳಗ್ಗೆ 9 ಗಂಟೆಯಿಂದಲೇ ಗಣ ಹೋಮ, ನವಗ್ರಹ ಹೋಮ, ಗಂಗಾ ಪೂಜೆ, ಪರ್ಜನ್ಯ ಹೋಮ, ಪೂರ್ಣಾಹುತಿ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನೆರವೇರಿದವು. ಪೂಜೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಪಾಲ್ಗೊಂಡಿದ್ದರು. ಇದನ್ನೂ ಓದಿ : – ಜ್ಞಾನವಾಪಿ ಮಸೀದಿ ವಿವಾದ – ಇಂದು ಮುಸ್ಲಿಂ ಮಂಡಳಿ ಅರ್ಜಿ ವಿಚಾರಣೆ

ದೇಶದ ಏಳು ಮಹಾನದಿಗಳ ಹೆಸರಿನಲ್ಲಿ ಇಡಲಾಗಿದ್ದ ಹದಿನೈದು ಪುಟ್ಟ ಕಳಸಗಳಿಗೆ ಕುಮಾರಸ್ವಾಮಿ ( KUMARSWAMY ) ಅವರು ಶಾಸ್ತ್ರಬದ್ಧವಾಗಿ ಪೂಜೆ, ವಿಧಿ ವಿಧಾನ ನೆರವೇರಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಪೂಜಾ ಕೈಂಕರ್ಯ ಬೆಳಗ್ಗೆ 12 ಗಂಟೆಗೆ ಸಮಾಪ್ತಿಯಾಯಿತು. ಇದಾದ ಮೇಲೆ ಬ್ರಹ್ಮಕಳಸ ಪ್ರತಿಷ್ಠಾಪನೆ ನಡೆಯಿತು. ರಾಜ್ಯದ ಉದ್ದಗಲಕ್ಕೂ ಸಂಗ್ರಹ ಮಾಡಲಾಗಿದ್ದ ಜಲವನ್ನು ಅದಕ್ಕೆ ತುಂಬಿಸಲಾಯಿತು.ಮೊದಲು ಕುಮಾರಸ್ವಾಮಿ ಅವರು ಪುಟ್ಟ ಕಳಸದ ಮೂಲಕ ಬ್ರಹ್ಮ ಕಳಸಕ್ಕೆ ಪವಿತ್ರ ಜಲವನ್ನು ತುಂಬಿಸಿದರು. ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇಂದಿನಿಂದ ಈ ಕಳಸಕ್ಕೆ ಮುಂದಿನ ಒಂದು ವರ್ಷ ಕಾಲ ಸಂಪ್ರದಾಯದಂತೆ ನಿತ್ಯ ಗಂಗಾ ಪೂಜೆ ನಡೆಯಲಿದೆ. ಇದನ್ನೂ ಓದಿ : – ಅಬ್ಬಾಬ್ಬಾ..! ನಾಯಿಯಂತೆ ಕಾಣಲು ಈತ 12 ಲಕ್ಷ ವ್ಯಯಿಸಿದ್ದಾನೆ..!

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!