ಹೋಳಿ ಆಡಿ ನಂತರ ಸ್ನಾನ ಮಾಡಲು ನದಿಗೆ ಇಳಿದ ಅಣ್ಣ ಮತ್ತು ತಮ್ಮ ಮೃತಪಟ್ಟು, ಗೆಳೆಯ ಚಿಂತಾಜಕ ಸ್ಥಿತಿಯಲ್ಲಿರುವ ಘಟನೆ ಹಾವೇರಿಯಲ್ಲಿ ಸಂಭವಿಸಿದೆ.
ಹಾವೇರಿ ತಾಲೂಕಿನ ನಾಗನೂರು ನದಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಹೇಶ್ ದುಂಡಣ್ಣನವರ (13) ಮತ್ತು ವಿರೇಶ್ ಅಕ್ಕಿವಳ್ಳಿ (13) ಮೃತಪಟ್ಟಿದ್ದು, ಯೋಗಿಶ್ ಅಕ್ಕಿವಳ್ಳಿ 11 ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೋಳಿ ಹಬ್ಬದ ಪ್ರಯುಕ್ತ ಬಣ್ಣ ಆಟವಾಡಿ ಒಂದೆಡೆ ಗುಂಪಾಗಿ ಸೇರಿದ್ದ ಮಕ್ಕಳು ಸ್ನಾನ ಮಾಡಲು ನದಿಗೆ ತೆರಳಿದ್ದರು. ಅಣ್ಣ-ತಮ್ಮ ಸೇರಿದಂತೆ ಇನ್ನೊರ್ವ ಗೆಳೆಯ ನದಿಗೆ ಇಳಿದಿದ್ದು, ಈಜಲು ಬಾರದ ಕಾರಣ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಮೃತ ಬಾಲಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಶಾಸಕ ವಿರೂಪಾಕ್ಷ ಬಳ್ಳಾರಿ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಹಾವೇರಿ ಗ್ರಾಮೀಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.