ಬಾಗಲಕೋಟೆ: ವೇಗವಾಗಿ ಬಂದ ಕಾರು ನಿಂತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೇವಿನಮಟ್ಟಿ ಕ್ರಾಸ್ ಬಳಿ ನಡೆದಿದೆ.
ಮೃತರನ್ನು ಚಂದ್ರಶೇಖರ್ ಬುಟ್ಟಾ (22), ನವೀನ್ ಸಾಕಾ (20), ಚನ್ನಬಸವ ಅಂಜಿ (22) ಹಾಗೂ ಬಸವರಾಜ್ ಭಂಡಾರಿ (33) ಎಂದು ಗುರುತಿಸಲಾಗಿದೆ. ಇವರೆಲ್ಲರು ಇಳಕಲ್ ಮೂಲದವರು ಎನ್ನಲಾಗಿದೆ.
ಈ ನಾಲ್ವರು ಇಳಕಲ್ ನಿಂದ ಗುಳೇದಗುಡ್ಡಕ್ಕೆ ಹುಟ್ಟುಹಬ್ಬದ ಆಚರಣೆಗೆ ಹೋಗಿದ್ದರು. ಮರಳಿ ಹುನಗುಂದ ಮಾರ್ಗಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಕಾರು ಚಾಲಕ ವಿಜಯಕುಮಾರ್ ಬಂಡಿ ಗಾಯಗೊಂಡಿದ್ದಾರೆ. ಅವರು ಸ್ಥಿತಿ ಗಂಭೀರವಾಗಿದ್ದು, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಹುನಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.