ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ರುಂಡ ಮುಂಡ ಬೇರೆ ಮಾಡಿ ಕೊಲೆ ಮಾಡಿದ್ದ ಪ್ರಕರಣವನ್ನ ಭೇದಿಸುವಲ್ಲಿ ಧಾರವಾಡ ಜಿಲ್ಲಾ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ಏಪ್ರಿಲ್ 11 ರಂದು ಹುಬ್ಬಳ್ಳಿಯ ದೇವರಗುಡಿಹಾಳ ಬಳಿ ವ್ಯಕ್ತಿಯೋರ್ವನ ರುಂಡ ಪತ್ತೆಯಾಗಿತ್ತು. ಅದೇ ದಿನ ಹುಬ್ಭಳ್ಳಿ ಕೇಶ್ವಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುಂಡ ಇಲ್ಲದ ಮುಂಡ ಅರೇ ಬರೆ ಸುಟ್ಟ ಸ್ಥಿಯಲ್ಲಿ ಸಿಕ್ಕಿದ್ದವು.
ಈ ಪ್ರಕರಣದ ಬೆನ್ನಟ್ಟಿದ ಧಾರವಾಡ ಜಿಲ್ಲಾ ಪೊಲೀಸರು, ನಾಲ್ವರು ಕೊಲೆ ಆರೋಪಿಗಳನ್ನ ಬಂಧಿಸಿದ್ದಾರೆ. ಇನ್ನು ಕೊಲೆಯಾದವನನ್ನು ರಾಕೇಶ ಕಾಟವೆ ಎಂದು ಗುರುತಿಸಲಾಗಿದ್ದು, ಇತನನ್ನು ಕೊಲೆ ಮಾಡಿದವರನ್ನು ನಿಯಾಜ್ ಅಹ್ಮದ ಕಟಿಗಾರ, ತೌಸಿಫ್ ಚಿನ್ನಾಪೂರ, ಅಲ್ತಾಫ ಮುಲ್ಲಾ ಹಾಗೂ ಅಮನ ಗರಣಿವಾಲೆ ಎಂಬುವವರನ್ನ ಬಂಧಿಸಿದ್ದಾರೆ.
ಪ್ರಮುಖ ಕೊಲೆ ಆರೋಪಿ ನಿಯಾಜ್ ಹಾಗೂ ಕೊಲೆಯಾದ ರಾಕೇಶ್ ಕಾಟವೆ ಸಹೋದರಿ ನಡುವೆ ಪ್ರೇಮ ಇತ್ತು. ಇದೇ ವಿಚಾರಕ್ಕೆ ಪ್ರೇಯಸಿ ಶನಾಯ್ ಕಾಟವೆಗಾಗಿ ನಿಯಾಜ್ ತನ್ನ ಸಂಗಡಿಗರ ಜೊತೆ ಸೇರಿ ಈ ರೀತಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಜಿಲ್ಲಾ ಪೊಲೀಸರು, ತನಿಖೆ ಮುಂದೆವರೆಸಿದ್ದಾರೆ.
ಶನಾಯ್ ಕಾಟವೆ ಧಾರಾವಾಹಿಗಳಲ್ಲಿ ಕೂಡಾ ಕೆಲಸ ಮಾಡಿದ್ದಾಳೆ. ಅಲ್ಲದೇ ಮಾಡೆಲಿಂಗ್ ಕೂಡ ಮಾಡುತಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದರಾರೆ.