ಭಾರತದಲ್ಲಿ ರೂಪಾಂತರಗೊಂಡು ದುಪಟ್ಟು ಅಪಾಯಕಾರಿಯಾಗಿ ಪರಿಣಮಿಸಿರುವ ಕೊರೊನಾ ಸೋಂಕು 10 ರಾಷ್ಟ್ರಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥೆ ಮರಿಯಾ ವ್ಯಾನ್ ಕೆಕ್ರೊವ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಈಗಾಗಲೇ ಹೊಸ ತಳಿಯ ಸೋಂಕು ಭಾರತವನ್ನು ಮಾತ್ರವನ್ನು ಮಾತ್ರವಲ್ಲ ಇತರೆ ದೇಶಗಳನ್ನು ಕಾಡುತ್ತಿದೆ ಎಂದಿದ್ದಾರೆ.
ಭಾರತದಲ್ಲಿ ರೂಪಾಂತರಿ ಕೊರೊನಾ ಡಬಲ್ ಕೊರೊನಾ ಎಂದು ಕರೆಯಲಾಗುತ್ತಿದ್ದು, ಇದಕ್ಕೆ ಕಾರಣ ಇದು ದುಪ್ಪಟ್ಟು ಅಪಾಯಕಾರಿ ಆಗಿರುವುದು. ಈಗಾಗಲೇ ಆಸ್ಟ್ರೇಲಿಯಾ, ಬೆಲ್ಜಿಯಂ, ಜರ್ಮನಿ, ಐಲೆಂಡ್, ನಮಿಬಿಯ, ನ್ಯೂಜಿಲೆಂಡ್, ಸಿಂಗಾಪುರ, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ 10 ರಾಷ್ಟ್ರಗಳಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ.