ಕೊರೊನಾ ವೈರಸ್ ನಿಂದ ಇಡೀ ದೇಶವೇ ಸಂಕಷ್ಟದಲ್ಲಿದ್ದರೂ ಉದ್ಯಮಿ ಗೌತಮ್ ಅದಾನಿ ಏರಿಕೆಯಾಗಿದ್ದು, ನಿಮಿಷಕ್ಕೆ 1.25 ಕೋಟಿ ರೂ. ಸಂಪಾದಿಸುತ್ತಿದ್ದಾರೆ.
ಕೊರೊನಾ ಎರಡನೇ ಅಲೆಯ ಭೀಕರತೆ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಹಾಗೂ ಉದ್ಯಮಿ ಗೌತಮ್ ಅದಾನಿಯ ಸಂಪತ್ತು ಈ ವರ್ಷ ಗಂಟೆಗೆ 75 ಕೋಟಿ ರೂ.ಯಷ್ಟು ಹೆಚ್ಚಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಅದಾನಿ ಕೂಡ ದೊಡ್ಡ ಮಟ್ಟದಲ್ಲಿ ಲಾಭ ಕಂಡಿದ್ದರು. ಈ ಮೂಲಕ ಅದಾನಿ ಗ್ರೂಪ್ಸ್ ದೇಶದ ಶ್ರೀಮಂತ ಕುಟುಂಬಗಳಾದ ಟಾಟಾ, ಬಿರ್ಲಾ, ಅಂಬಾನಿ ಮತ್ತು ವಾಡಿಯಾ ಕುಟುಂಬಗಳ ಸರಿಸಮಯಕ್ಕೆ ಬಂದು ನಿಂತಿದೆ.
ಅದಾನಿ ಸಮೂಹದಲ್ಲಿರುವ ಕಂಪನಿಗಳ ಪೈಕಿ ಇನ್ಫ್ರಾದಲ್ಲಿ ಹೆಚ್ಚು ಹೂಡಿಕೆ ಆಗುತ್ತಿರುವುದು ಲಾಭಾಂಶ ಹೆಚ್ಚಲು ಕಾರಣ ಎನ್ನಲಾಗಿದೆ. ಈ ಕಂಪನಿಗಳಿಗೆ ಕಳೆದ ಒಂದೆರಡು ವರ್ಷಗಳಿಂದ ವೇಗವಾಗಿ ಹೂಡಿಕೆ ಹರಿದು ಬರುತ್ತಿದೆ. ಕಳೆದ ವರ್ಷ 25 ಸಾವಿರ ಕೋಟಿ ರೂ. ಇದ್ದ ಹೂಡಿಕೆ ಈಗ ಒಟ್ಟು 50,000 ಕೋಟಿ ರೂ.ಗೆ ಏರಿಕೆಯಾಗಿದೆ. ಅದಾನಿ ಗ್ರೂಪ್ ಕ್ರಮವಾಗಿ ಅನಿಲ ವಿತರಣೆ, ವಿದ್ಯುತ್, ಬಂದರು ಮತ್ತು ಎನರ್ಜಿಯಂತಹ ಉದ್ಯಮಗಳತ್ತ ಗಮನಹರಿಸುತ್ತದೆ.
ಅದಾನಿ ಗ್ರೂಪ್ ಕಳೆದ ವರ್ಷ 1.64 ಲಕ್ಷ ಕೋಟಿ ರೂ. ಇದದ್ದು, ಈ ವರ್ಷ ಶೇ.420ರಷ್ಟು ಏರಿಕೆಯಾಗಿ 8.5 ಲಕ್ಷ ಕೋಟಿ ರೂ.ಗೆ ತಲುಪಿದೆ. ಮುಖೇಶ್ ಅಂಬಾನಿ 77 ಬಿಲಿಯನ್ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ. ಗೌತಮ್ ಅದಾನಿ ಅವರ ಆಸ್ತಿ 69 ಬಿಲಿಯನ್ ಡಾಲರ್ ಆಸ್ತಿಗೆ ಒಡಯರಾಗಿದ್ದಾರೆ.
ಅದಾನಿಯ ಸಂಪತ್ತು 2021ರ ಆರಂಭದಿಂದ ಗಂಟೆಗೆ 75 ಕೋಟಿ ರೂ.ಯಷ್ಟು ಗಳಿಕೆ ಕಂಡಿದೆ. ಈ ಮೂಲಕ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಫ್ರೆಂಚ್ ಐಷಾರಾಮಿ ಉದ್ಯಮಿ ಬರ್ನಾರ್ಡ್ ಅರ್ನಾಲ್ಡ್ ಅವರನ್ನು ಹಿಂದಿಕ್ಕಿದ್ದು, ಮುಖೇಶ್ ಅಂಬಾನಿಯನ್ನು ಹಿಂದಿಕ್ಕುವರೇ ಎಂಬುದು ಕಾದು ನೋಡಬೇಕಿದೆ.