ಬೆಂಗಳೂರು : ಸರ್ಕಾರ ಜೊತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿದ್ದ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಟ್ವಿಟರ್ ನಲ್ಲಿ ಕಾಂಗ್ರೆಸ್ ತೀರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಕಾಂಗ್ರೆಸ್ ಹೆಸರನ್ನು ನಿಮ್ಮ ಸ್ವಾರ್ಥದ ಬಣ ಕಿತ್ತಾಟಗಳಿಗೆ ಬಳಸಿಕೊಳ್ಳಬೇಡಿ. ರಾಜ್ಯ ಸಾವಿನ ಮನೆಯಂತಾಗಿದೆ. ಈ ಹೊತ್ತಿನಲ್ಲಿ ಹರಿದ ಬನಿಯನ್‌ನಂತೆ ಬಿಜೆಪಿ ಆಗಿದೆ. ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟವು ರಾಜ್ಯಕ್ಕೆ ಮಾರಕವಾಗಲಿದೆ. ಮಾನ, ಮರ್ಯಾದೆ, ಲಜ್ಜೆ ಮೂರು ಬಿಟ್ಟಿರುವ ಪಕ್ಷ ಬಿಜೆಪಿ. ಕುರ್ಚಿ ಕದನ ನಡೆಸಲೆಂದೇ ಕೊರೊನಾ ಕೇಸ್‌ಗಳನ್ನು ಕಡಿಮೆ ತೋರಿಸಲಾಗುತ್ತಿದೆ. ಅದಕ್ಕಾಗಿ ವೇದಿಕೆ ಸಜ್ಜುಗೊಳಿಸಿಕೊಂಡಿದೆ.
VijayendraServiceTax ಲೂಟಿಯನ್ನು ತಮ್ಮದೇ ಪಕ್ಷದವರು ಆರೋಪಿಸುತ್ತಿದ್ದರೂ. ನಾ ಖಾವೊಂಗ ನಾ ಖಾನೆದುಂಗ” ಪ್ರಧಾನಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದಿರುವುದು ದುರಂತ ಎಂದು ಬಿಜೆಪಿಗೆ ಕಾಂಗ್ರೆಸ್ ಟಕ್ಕರ್ ಕೊಟ್ಟಿದೆ.