ದಾವಣೆಗೆರೆ : ರಾಜ್ಯ ಸಚಿವ ಸಂಪುಟದಿಂದ ಸಿ ಪಿ ಯೋಗೇಶ್ವರ್ ಅವರನ್ನು ವಜಾ ಮಾಡಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಆಗ್ರಹ ಮಾಡಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು, ಜಲಸಂಪನ್ಮೂಲ ಅಥವಾ ಇಂಧನ ಖಾತೆ ಬೇಕಿತ್ತು. ರಾಮನಗರ ಜಿಲ್ಲೆ ಉಸ್ತುವಾರಿಯೂ ಸಿಗಬೇಕಿತ್ತು. ಆದರೆ ಸಿಗಲಿಲ್ಲ. ಹೀಗಾಗಿ ಸಿ.ಪಿ ಯೋಗೇಶ್ವರ್ ಗೆ ತಳಮಳವಾಗಿದೆ. ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ 65 ಶಾಸಕರ ಸಹಿ ಸಂಗ್ರಹಿಸಿ ಮುಖ್ಯಮಂತ್ರಿಗಳಿಗೆ ನೀಡಿದ್ದೇವೆ. ಯೋಗೇಶ್ವರ್ ನ್ನ ಸಂಪುಟದಿಂದ ಕೈಬಿಡಿ ಮೆಗಾ ಸಿಟಿ ಹಗರಣದಲ್ಲಿ ಯೋಗೇಶ್ವರ್ ಬಂಧನವಾಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೊರೊನಾ ಸಂಕಷ್ಟ ಎದುರಾಗಿದೆ. ಹೀಗಾಗಿ ಕೊರೊನಾ ಸಂದರ್ಭ ಮುಗಿಯಲಿ. ನಂತರ ಶಾಸಕರು ಸುಮ್ಮನಿರುವ ಪ್ರಶ್ನೆಯೇ ಇಲ್ಲ. ನಮ್ಮ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ಯೋಗೇಶ್ವರ್ ಅವರನ್ನು ಸಂಪುಟದಿಂದ ವಜಾ ಮಾಡುವವರೆಗೂ ಸುಮ್ಮನೆ ಕೂರಲ್ಲ ಎಂದು ತಿಳಿಸಿದರು.