ಕೊರೊನಾ ಎರಡನೇ ಅಬ್ಬರದ ಹಿನ್ನೆಲೆಯಲ್ಲಿ ವಿಧಿಸಲಾದ ಲಾಕ್ ಡೌನ್ ನಿಂದಾಗಿ ರಾಜ್ಯಕ್ಕೆ ಸುಮಾರು 60,000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ವರದಿ ಹೇಳಿದೆ.
ಲಾಕ್ ಡೌನ್ ವಿಧಿಸಿದ್ದರಿಂದ ಮೇ ತಿಂಗಳಲ್ಲಿ ರಾಜ್ಯಕ್ಕೆ 60,000 ಕೋಟಿ ನಷ್ಟ ಉಂಟಾಗಿದ್ದು, ದೇಶಿಯ ಉತ್ಪನ್ನ (ಜಿಡಿಪಿ) ಶೇ.3.75ರಷ್ಟು ಕುಸಿದಿದೆ ಎಂದು ಸೆಂಟರ್ ಫಾರ್ ಮಾನಿಟಿರಿಂಗ್ ಇಂಡಿಯನ್ ಎಕಾನಮಿ ಸಮೀಕ್ಷೆ ವರದಿ ತಿಳಿಸಿದೆ.
ಮೇ ತಿಂಗಳ ಲಾಕ್ ಡೌನ್ ಜಾರಿ ಹಿನ್ನೆಲೆಯಿಂದ ಅರ್ಥಿಕ ಪರಿಣಾಮಗಳ ಕುರಿತ ವರದಿಯಲ್ಲಿ ನಿರುದ್ಯೋಗ ಮಟ್ಟ ಕೂಡಶೇ.14.73% ರಷ್ಟು ಕುಸಿದಿದೆ. 2021ರ ಏಪ್ರಿಲ್ ನಲ್ಲಿ ನಿರುದ್ಯೋಗ ದರ ಶೇ.8% ಕ್ಕೇರಿತ್ತು. ಆದರೆ ಮೇ ತಿಂಗಳಲ್ಲಿ ನಿರುದ್ಯೋಗ ದರ ಕುಸಿದಿದೆ.
ಉದ್ಯೋಗ ಮಾರುಕಟ್ಟೆ ಕುಸಿತ ಕಂಡಿದ್ದು, ಉದ್ಯೋಗ ಸಂಖ್ಯೆ 3.5 ದಶಲಕ್ಷ ಇಳಿಕೆ ಕಂಡಿದೆ. 2020-21 ಜನವರಿವರೆಗೆ 403.5 ದಶಲಕ್ಷ ಉದ್ಯೋಗಸ್ಥರು ಇದ್ದರು ಎಂದು ವರದಿ ಹೇಳಿದೆ.