ಚತ್ತೀಸ್ ಘಡದಲ್ಲಿ ನಕ್ಸಲರ್ ವಿರುದ್ಧ ಹೋರಾಟದ ವೇಳೆ ನಾಪತ್ತೆಯಾದ 21 ಯೋಧರು ಇನ್ನೂ ಪತ್ತೆಯಾಗದೇ ಇರುವುದು ಆತಂಕ ಮೂಡಿಸಿದೆ.
ಸುಕುಮ- ಬಿಜಾಪುರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ನಕ್ಸಲರು ದಾಳಿ ನಡೆಸಿದ್ದಕ್ಕೆ ಪ್ರತಿದಾಳಿ ನಡೆಸಿದ ಯೋದರು ಎನ್ ಕೌಂಟರ್ ಆರಂಭಿಸಿದ್ದರು. ಇದರಲ್ಲಿ 5 ಯೋಧರು ಹುತಾತ್ಮರಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮಹಿಳೆ ಸೇರಿದಂತೆ ಇಬ್ಬರು ನಕ್ಸಲರು ಮೃತಪಟ್ಟಿದ್ದರು.
ಘಟನೆ ಬಗ್ಗೆ ಮಾಹಿತಿ ಪಡೆಯಲು ಸಿಆರ್ ಪಿಎಫ್ ಡೈರೆಕ್ಟರ್ ಜನರಲ್ ಕುಲದೀಪ್ ಸಿಂಗ್ ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಾಯಾಳು ಯೋಧರಿಗೆ ಬಿಜಾಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.