ತೈವಾನ್‌ ಆಕ್ರಮಿಸಲು ಮುಂದಾದ ಚೀನಾ? ಲಕ್ಷ, ಲಕ್ಷ ಯೋಧರು, ನೂರಾರು ಸೇನಾ ನೌಕೆಗಳು ಸಜ್ಜು

ತೈವಾನ್ (TAIWAN ) ಕುರಿತ ನಮ್ಮ ರಾಷ್ಟ್ರೀಯ ಹಿತಾಸಕ್ತಿ ನಾವು ಬದ್ಧರಾಗಿದ್ದೇವೆ ಎಂದು ಚೀನಾ (CHINA ) ಸರ್ಕಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ (JOE BIDEN )ಗೆ ಎಚ್ಚರಿಕೆ ನೀಡಿದೆ.

ಚೀನಾದ ಯಾವುದೇ ಆಕ್ರಮಣದಿಂದ ಕ್ಷಿಸುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪ್ರತಿಜ್ಞೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಚೀನಾ, ತೈವಾನ್ ಕುರಿತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧ ಎಂದು ಹೇಳಿದೆ. ತೈವಾನ್‌ ಮೇಲೆ ಆಕ್ರಮಣ ನಡೆಸಲು ಚೀನಾದ ಸೇನಾಧಿಕಾರಿಗಳು ಚರ್ಚಿಸಿರುವುದಕ್ಕೆ ಸಂಬಂಧಿಸಿದ ಸ್ಫೋಟಕ ಆಡಿಯೊ ತುಣುಕೊಂದು ಬಹಿರಂಗವಾಗಿದೆ.ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಚೀನಾಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಚೀನಾದ ನಡೆಯನ್ನು ಬೈಡನ್‌ ‘ಅಪಾಯದೊಂದಿಗೆ ಚೆಲ್ಲಾಟ’ ಎಂದು ಎಚ್ಚರಿಸಿದ್ದಾರೆ. ಕ್ವಾಡ್‌ ಸಮಾವೇಶದಲ್ಲಿ ಭಾಗಿಯಾಗಲು ಟೋಕಿಯೊಗೆ ತೆರಳಿರುವ ಬೈಡನ್ ಚೀನಾದ ಸೇನಾ ಯೋಜನೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ದ್ವೀಪ ರಾಷ್ಟ್ರ ತೈವಾನ್‌ ಮೇಲೆ ಚೀನಾ ಆಕ್ರಮಣಕ್ಕೆ ಮುಂದಾದರೆ, ಅಮೆರಿಕ ತೈವಾನ್‌ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ.ಬೈಡೆನ್ ಹೇಳಿಕೆಗೆ ಚೀನಾ ಸರ್ಕಾರ ತಿರುಗೇಟು ನೀಡಿದೆ. ತೈವಾನ್ ಚೀನಾದ ಅವಿಭಾಜ್ಯ ಅಂಗವಾಗಿದ್ದು, ಚೀನಾದಿಂದ ಬೇರ್ಪಡಿಸಲಾಗದ ಭಾಗವಾಗಿದೆ.

ತೈವಾನ್ ಸಮಸ್ಯೆಯು ಚೀನಾದ ಸಂಪೂರ್ಣ ಆಂತರಿಕ ವ್ಯವಹಾರವಾಗಿದೆ. ಚೀನಾದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ಪ್ರಮುಖ ಹಿತಾಸಕ್ತಿಗಳ ಮೇಲೆ ಸ್ಪರ್ಶಿಸುವ ವಿಷಯಗಳಲ್ಲಿ, ಚೀನಾವು ರಾಜಿ ಅಥವಾ ರಿಯಾಯಿತಿಗೆ ಅವಕಾಶ ನೀಡುವುದಿಲ್ಲ” ಎಂದು ಹೇಳಿದೆ.
ಈ ನಡುವೆ ಚೀನಾ ಮೂಲದ ಮಾನವ ಹಕ್ಕುಗಳ ಹೋರಾಟಗಾರರಾದ ಜೆನಿಫರ್ ಹೆಂಗ್ ಟ್ವೀಟ್ ಮಾಡಿರುವ ಆಡಿಯೊ ಕ್ಲಿಪ್ ಚೀನಾದಾದ್ಯಂತ ಸಂಚಲನ ಮೂಡಿಸಿದೆ. ‘ಲ್ಯೂಡ್ ಮೀಡಿಯಾ’ (LUDE media) ಯುಟ್ಯೂಬ್ ಚಾನೆಲ್ನಲ್ಲಿ 57 ನಿಮಿಷಗಳ ಆಡಿಯೊ ಕ್ಲಿಪ್ ಪ್ರಕಟಿಸಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚೀನಾದ ಸೇನಾಪಡೆಯ ಗೌಪ್ಯ ಚರ್ಚೆ ಸೋರಿಕೆಯಾಗಿದೆ. ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಅವರು ತೈವಾನ್ ಮೇಲೆ ರೂಪಿಸಿರುವ ಸೇನಾ ಕಾರ್ಯಾಚರಣೆ ಯೋಜನೆಯ ಕುರಿತ ಚರ್ಚೆಯನ್ನು ಚೀನಾ ಕಮ್ಯುನಿಸ್ಟ್ ಪಾರ್ಟಿಯ ಹಿರಿಯ ಅಧಿಕಾರಿಯೊಬ್ಬರು ಸೋರಿಕೆ ಮಾಡಿರುವುದಾಗಿ ಲ್ಯೂಡ್ ಮಿಡಿಯಾ ಪ್ರಸ್ತಾಪಿಸಿದೆ.ಆಡಿಯೋದಲ್ಲಿ ತೈವಾನ್‌ನ ಪಡೆಗಳನ್ನು ಧ್ವಂಸಗೊಳಿಸುವ ಹಾಗೂ ಯುದ್ಧ ಆರಂಭಿಸುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ :- ಅರಬ್ ದೇಶಗಳಲ್ಲಿ ಭಾರತದ ಮೇಲೆ ಹಬ್ಬಿದ ವದಂತಿ ಏನು ಗೊತ್ತಾ…?

ಗಾಂಗ್‌ಡಾಂಗ್‌ ಪ್ರಾಂತ್ಯಕ್ಕೆ ಹಂಚಿಕೆಯಾಗಿರುವ ಕಾರ್ಯಾಚರಣೆಯಲ್ಲಿ 1.40 ಲಕ್ಷ ಸೇನಾ ಸಿಬ್ಬಂದಿ, 953 ಹಡಗುಗಳು, 1,653 ಮಾನವರಹಿತ ಸಾಧನಗಳು, 20 ವಿಮಾನ ನಿಲ್ದಾಣಗಳು ಹಾಗೂ ಹಡಗು ಕಟ್ಟೆಗಳು, ಆರು ಹಡಗು ನಿರ್ಮಾಣ ಮತ್ತು ದುರಸ್ಥಿ ಕಾರ್ಯ ನಡೆಸುವ ಘಟಕಗಳು, 14 ತುರ್ತು ಕೇಂದ್ರಗಳು, ಆಸ್ಪತ್ರೆಗಳು, ದವಸ ಧಾನ್ಯ ಸಂಗ್ರಹ ಕೇಂದ್ರಗಳು, ರಕ್ತ ಸಂಗ್ರಹ ಕೇಂದ್ರಗಳು, ತೈಲ ಹಾಗೂ ಅನಿಲ ಸಂಗ್ರಹಗಾರಗಳು,..ಸೇರಿದಂತೆ ಅಗತ್ಯ ಸಿದ್ಧತೆಯ ಬಗ್ಗೆ ಚರ್ಚಿಸಲಾಗಿದೆ.ಈಗಾಗಲೇ ಉಕ್ರೇನ್-ರಷ್ಯಾ ಯುದ್ಧವೇ ಜಗತ್ತಿನಲ್ಲಿ ತಲ್ಲಣ ಮೂಡಿಸಿದ್ದು, ತೈವಾನ್ ವಿರುದ್ಧ ಚೀನಾ ನಡೆ ಜಗತ್ತಿನಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಗತ್ತಿನಾದ್ಯಂತ ಭದ್ರತಾ ಸಂಸ್ಥೆಗಳು ಆಡಿಯೊದಲ್ಲಿರುವ ವಿಚಾರಗಳನ್ನು ಪರಿಶೀಲನೆಗೆ ಒಳಪಡಿಸಿವೆ. ಆ ಆಡಿಯೊದ ಸತ್ಯಾಸತ್ಯತೆಯ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ. ಇದನ್ನೂ ಓದಿ :- ಮೇಕೆದಾಟು ಪಾದಯಾತ್ರೆಯಲ್ಲಿ ನಿಯಮ ಉಲ್ಲಂಘನೆ ಆರೋಪ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸಿದ್ದರಾಮಯ್ಯಗೆ ಸಮನ್ಸ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!