ನಾಂದೇಡ್: ಮಹಾರಾಷ್ಟ್ರದ ಗುರುದ್ವಾರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 17 ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ನಾಂದೇಡ್ ಗುರುದ್ವಾರದಲ್ಲಿ ಹೋಲಾ ಮೊಹೊಲ್ಲಾಗೆ ಅನುಮತಿ ನೀಡುವುದಕ್ಕೆ ಸಾಧ್ಯವಿಲ್ಲ.
ಗುರುದ್ವಾರದೊಳಗೆ ಆಚರಣೆ ಮಾಡುವಂತೆ ಸಮಿತಿಗೆ ತಿಳಿಸಲಾಗಿತ್ತು. ಹೀಗಿರುವಾಗಲೂ ಹೋಲಾ ಮೊಹಲ್ಲಾ ಆಚರಣೆಗೆ ಯುವಕರು ಮುಂದಾಗಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೆ ಯುವಕರು ವಾಗ್ವಾದಕ್ಕಿಳಿದು ಬ್ಯಾರಿಕೇಡ್ಗಳನ್ನು ಮುರಿದು ಪೊಲೀಸರ ಮೇಲೆ ಖಡ್ಗಗಳಿಂದ ಹಲ್ಲೆ ನಡೆಸಿದ್ದರು.
ಈ ಪೈಕಿ ಕೆಲವು ಆರೋಪಿಗಳ ವಿರುದ್ಧ ಗಲಭೆ ಸೃಷ್ಟಿ ಮತ್ತು ಕೊಲೆ ಯತ್ನ ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಹಿಂಸಾಚಾರದಲ್ಲಿ 6 ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳನ್ನು ಜಖಂಗೊಳಿಸಲಾಗಿದೆ.
ಗುರುದ್ವಾರ ಗಲಭೆ ಬಗ್ಗೆ ಪೊಲೀಸರ ಮಾಹಿತಿ ಕೊರೋನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಹೋಲಾ ಮೊಹೊಲ್ಲಾ ಸಾರ್ವಜನಿಕ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲ. ಹೋಳಿ ಹಬ್ಬದ ಮರು ದಿನ ಸಿಖ್ಖರು ಆಚರಿಸುವ ಸಾಂಪ್ರದಾಯಿಕ ಆಚರಣೆಯೇ ಈ ಹೋಲಾ ಮೊಹೊಲ್ಲಾ.