ಶ್ರೀಲಂಕಾದ ತಿಸ್ಸರಾ ಪೆರೆರಾ ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ಲಂಕಾದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾದರು.
ಕೊಲೊಂಬೊದಲ್ಲಿ ನಡೆದ ದೇಶೀಯ ಟೂರ್ನಿಯಲ್ಲಿ 31 ವರ್ಷದ ತಿಸ್ಸರ ಪೆರೆರಾ, ಈ ವರ್ಷದಲ್ಲೇ ಸತತ 6 ಸಿಕ್ಸರ್ ಸಿಡಿಸಿದ ಆಟಗಾರರಾಗಿದ್ದಾರೆ. ಇತ್ತೀಚೆಗಷ್ಟೇ ಕೀರನ್ ಪೊಲಾರ್ಡ್ ಶ್ರೀಲಂಕಾ ವಿರುದ್ಧ ಟಿ-20ಯಲ್ಲಿ ಸಿಕ್ಸರ್ ಬಾರಿಸಿದ್ದರು.
ಶ್ರೀಲಂಕಾ ಆರ್ಮಿ ತಂಡದ ಪರ ಆಡಿದ ತಿಸ್ಸರ ಪೆರೆರಾ, 13 ಎಸೆತಗಳಲ್ಲಿ 8 ಸಿಕ್ಸರ್ ಸೇರಿದ ಅಜೇಯ 52 ರನ್ ಸಿಡಿಸಿದರು. ಇದರಲ್ಲಿ ಸತತ 6 ಸಿಕ್ಸರ್ ದಾಖಲೆ ಕೂಡ ಸೇರಿದೆ.
ತಿಸ್ಸರಾ ಪೆರೆರಾ, ಒಂದೇ ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ ಹರ್ಷಲ್ ಗಿಬ್ಸ್, ರವಿಶಾಸ್ತ್ರಿ, ಯುವರಾಜ್ ಸಿಂಗ್, ಗ್ಯಾರಿ ಸೋಬರ್ಸ್, ರಾಸ್ ವೆಟ್ಟಲಿ, ಹರ್ಜತುಲ್ಲಾ ಜಜಾಯಿ, ಲಿಯೊ ಕಾರ್ಟರ್ ಮತ್ತು ಕೀರನ್ ಪೊಲಾರ್ಡ್ ದಾಖಲೆ ಸರಿಗಟ್ಟಿದರು.
ಪೆರೆರಾ 6 ಟೆಸ್ಟ್, 166 ಏಕದಿನ ಮತ್ತು 84 ಟಿ-20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.