ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ. ಈಗಾಗಲೇ ಕಾಂಗ್ರೆಸ್ ನಿಂದ 2 ಸಲ ಎಂಎಲ್ಸಿ ಕೊಟ್ಟಿದ್ವಿ. ಅವರ ಬೇಡಿಕೆ ಎಸ್.ಆರ್.ಪಾಟೀಲ್ ತೆಗೆದು ನಮ್ಮನ್ನ ನೇಮಕ ಮಾಡುವಂತೆ ಒತ್ತಾಯಿಸಿದ್ರು ಎಂದು ಸಲೀಂ ಅಹಮದ್ ಸ್ಪೋಟಕ ಮಾಹಿತಿಯೊಂದನ್ನ ಹೇಳಿದ್ದಾರೆ.
ತುಮಕೂರಲ್ಲಿ ಮಾತನಾಡಿದ ಅವರು ಸಿಟ್ಟಿಂಗ್ ಎಂಎಲ್ ಎ ಸಂಗಮೇಶ್ ತೆಗೆದು ಟಿಕೇಟ್ ಕೊಟ್ಟಿದ್ವಿ. ಪ್ಲಾನಿಂಗ್ ಕಮೀಷನ್ ಉಪಾಧ್ಯಕ್ಷ ಮಾಡಿದ್ವಿ.ನೇಮಕ ಮಾಡುವಂತೆ ಸುರ್ಜೆವಾಲಾಗೆ ಬೇಡಿಕೆ ಇಟ್ಟಿದ್ರು. ಅದಕ್ಕೆ ಎಐಸಿಸಿ ಒಪ್ಪಲಿಲ್ಲ ಕೆಲಸ ಮಾಡಿಕೊಂಡು ಹೋಗಿ ಅಂತ ಹೇಳಿದ್ರು ಅದಕ್ಕೆ ಒಪ್ಪಲಿಲ್ಲ. 2 ವರ್ಷದಿಂದ ಯಾವುದೇ ಕಾರ್ಯಕ್ರಮಕ್ಕೆ ಬರಲಿಲ್ಲ. ಹಾನಗಲ್ ನಾನು ಉಸ್ತುವಾರಿ ಯಾಗಿದ್ದೆ ಅವರು ಒಂದು ದಿನ ಬರಲಿಲ್ಲ. 99% ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ. ಇದನ್ನೂ ಓದಿ :- ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ – ಅರವಿಂದ ಬೆಲ್ಲದ್
ಸಿಂದಗಿ, ಎಂಎಲ್ಸಿಗೂ ಅವರು ಬರಲಿಲ್ಲ, ಅಲ್ಲೂ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ಬೆಂಬಲ ನೀಡಿದ್ರು. ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಮೇಲೆ, ಸಿದ್ಧಾಂತದ ಮೇಲೆ ಪಕ್ಷಕ್ಕೆ ಓಟ್ ಹಾಕ್ತಾರೆ.ಜನ ನೋಡಿ ಮುಖಂಡರನ್ನ ನೋಡಿ ಜನ ಓಟ್ ಹಾಕೋಲ್ಲ ಎಂದು ತಿಳಿಸಿದ್ರು.
ಇದನ್ನೂ ಓದಿ :- ಬೆಂಗಳೂರಿನ ಫ್ಲೈಓವರ್ ನಲ್ಲಿ ಭೀಕರ ಅಪಘಾತ- ಬೈಕ್ ಸವಾರ ಸಾವು