ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ- ಬಿಜೆಪಿ ಟ್ವೀಟ್

ಕಾಂಗ್ರೆಸ್ ಚಿಂತನಾ ಸಭೆಯಲ್ಲಿ ಕುಟುಂಬಕ್ಕೊಂದೆ ಟಿಕೆಟ್ ನಿಯಮ ಪ್ರಸ್ತಾಪಕ್ಕೆ ಬಿಜೆಪಿ ವ್ಯಂಗ್ಯ ಮಾಡಿದ್ದು ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಕಾಂಗ್ರೆಸ್ ವಂಶವಾದವನ್ನು ಮಾತ್ರ ಬಿಡಲ್ಲ ಎಂದು ಟೀಕಿಸಿದೆ.

ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ ಮೂಲಕ ಟೀಕಾಪ್ರಹಾರ ಮಾಡಿದೆ. ಕಾಂಗ್ರೆಸ್ ಚಿಂತನಾ ಸಭೆಯಲ್ಲಿ ನಡೆದ ಒಂದು ಕುಟುಂಬಕ್ಕೆ ಒಂದು ಟಿಕೆಟ್ ನಿಯಮವು ಗಾಂಧಿ ಕುಟುಂಬಕ್ಕೆ ಅನ್ವಯವಾಗುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್ ನ್ನು ಕಾಲೆಳೆದಿದೆ.

ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆಯಾದರೂ ಏನು? ಎಂದು ಪ್ರಶ್ನಿಸಿದ ಬಿಜೆಪಿ, ಬೆಳಗ್ಗೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಪ್ರಸ್ತಾಪ ಮಾಡಿತು. ಸಂಜೆಯಾಗುತ್ತಲೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗದು ಎಂಬ ಘೋಷಣೆ ಮಾಡಿತು. ನಂತರ ರಾತ್ರಿಯಾಗುತ್ತಲೇ, ಈ ನಿಯಮ ಗಾಂಧಿ ನಿಷ್ಠ ಕೆಲವು ಕುಟುಂಬಗಳಿಗೆ ಅನ್ವಯವಿಲ್ಲ ಎಂದು ರಾಜಿ ಮಾಡಿಕೊಳ್ಳಲಾಯಿತು. ಇದನ್ನೂ ಓದಿ :-  ಅವಿಮುಕ್ತೇಶ್ವರ ದೇವಾಲಯಕ್ಕೆ ಸಚಿವ ಅಶ್ವತ್ ನಾರಾಯಣ್ ಭೇಟಿ

ಧೃತರಾಷ್ಟ್ರ ಮೋಹ ಎಂಬ ಮಾತು ರಾಜಕಾರಣದಲ್ಲಿ ಸದಾ ಜೀವಂತವಾಗಿರ ಬೇಕೆಂಬುದನ್ನು ಕಾಂಗ್ರೆಸ್ ಬಯಸುತ್ತದೆ. ಏಕೆಂದರೆ ತಮ್ಮ ನಂತರ ತಮ್ಮ ಪಳಯುಳಿಕೆಗಳನ್ನೂ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಾಂಛೆ ಕಾಂಗ್ರೆಸ್ ರಕ್ತದಲ್ಲಿಯೇ ಇದೆ. ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಇವೆರಲ್ಲರೂ ಇದಕ್ಕೆ ಜ್ವಲಂತ ಉದಾಹರಣೆ ಆಗಿದ್ದಾರೆ.

ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮೋದಿ ಅವರು ಮಹತ್ವದ ನಿರ್ಧಾರ ಕೈಗೊಂಡು ವಂಶವಾದಕ್ಕೆ ಪೋಷಣೆ ನೀಡದೇ ಬಲಾಢ್ಯರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದರು. ಈ ನಿರ್ಧಾರದಿಂದ ಪಕ್ಷಕ್ಕೆ ಸೋಲಾದರೆ ಅದರ ಹೊಣೆ ತಾವೇ ಹೊರುವುದಾಗಿ ಘೋಷಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಈ ಧೈರ್ಯ ತೋರಿಸುವ ತಾಕತ್ತಿದೆಯೇ ಎಂದು ಬಿಜೆಪಿ ಸವಾಲು ಹಾಕಿದೆ.

ಇದನ್ನೂ ಓದಿ : –  ಬಸವ ಪಥವೆ ನನ್ನ ಪಥ – ಸಿಎಂ ಬೊಮ್ಮಾಯಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!