ತಂದೆ ತಾಯಿ ವಿರೋಧದ ನಡುವೆಯೇ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಯುವ ದಂಪತಿ ನೇಣಿಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೂಲತಃ ಮಾಗಡಿಯ ಚೆನ್ನೆನ ಹಳ್ಳಿ ನಿವಾಸಿಗಳಾದ ಹರ್ಷಿತಾ ಹಾಗೂ ಪುನೀತ್ ಆತ್ಮಹತ್ಯೆಗೆ ಶರಣಾದ ದಂಪತಿ.
ಬ್ಯಾಡರಳ್ಳಿ ಪೊಲೀಸ್ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೋಹಳ್ಳಿಯಲ್ಲಿ ವಾಸ ಮಾಡುತ್ತಿದ್ದ ಹರ್ಷಿತಾ ಮತ್ತು ಪುನೀತ್ 6 ವರ್ಷಗಳಿಂದ ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪುನೀತ್ 4 ತಿಂಗಳ ಹಿಂದೆ ಹರ್ಷಿತಾಳನ್ನ ಕೈ ಹಿಡಿದು ಬ್ಯಾಡರಹಳ್ಳಿಯ ಹೇರೋಹಳ್ಳಿಯಲ್ಲಿ ವಾಸವಾಗಿದ್ದರು. ಪ್ರೀತಿಗೆ ಒಪ್ಪದ ಪೋಷಕರು ಆಗಾಗ ಕಿರುಕುಳ ನೀಡುತ್ತಲೇ ಇದ್ದರು. ಇದರಿಂದ ಇಬ್ಬರು ಮನನೊಂದು ತಂದೆ ತಾಯಿಗಳ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.