ಬೈಕ್ ನಲ್ಲಿ ಬಂದ ಇಬ್ಬರು ಸಂಚಾರ ದಟ್ಟಣೆ ನಡುವೆ ಕಾರನ್ನು ನಿಲ್ಲಿಸಿ ವೈದ್ಯ ದಂಪತಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ರಾಜಸ್ಥಾನ್ ನ ಭಾರತ್ ಪುರದಲ್ಲಿ ನಡೆದಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶುಕ್ರವಾರ ಸಂಜೆ ಕಾರಿನಲ್ಲಿ ಬರುತ್ತಿದ್ದ ವೈದ್ಯ ದಂಪತಿಯನ್ನು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಇಬ್ಬರು ಕಾರನ್ನು ಅಡ್ಡಗಟ್ಟಿದ್ದಾರೆ. ಕಾರು ನಿಲ್ಲಿಸಿ ಗಾಜು ಕೆಳಗಿಳಿಸಿದ ಕೂಡಲೇ ಮುಸುಕುಧಾರಿ ವ್ಯಕ್ತಿ ಕಾರಿನಲ್ಲಿದ್ದ ವೈದ್ಯ ದಂಪತಿ ಮೇಲೆ ಗುಂಡಿನ ಮಳೆಗೆರೆದಿದ್ದಾನೆ.
ಘಟನೆಗೆ 2 ವರ್ಷಗಳ ಹಿಂದೆ ಯುವತಿಯೊಬ್ಬಳ ಕೊಲೆ ಪ್ರಕರಣದಲ್ಲಿ ಕೈವಾಡ ಹೊಂದಿದ್ದಾರೆ ಎಂಬ ಶಂಕೆ ಇತ್ತು. ವೈದ್ಯ ಗಂಡ ಮೃತ ಯುವತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಪತ್ನಿ ಹಾಗೂ ಆಕೆಯ ತಾಯಿ ಯುವತಿ ಸಾವಿನ ಹಿಂದೆ ಕೈವಾಡ ಹೊಂದಿದದ್ದರು ಎಂದು ಹೇಳಲಾಗಿದೆ.
ವೈದ್ಯ ದಂಪತಿಯನ್ನು ಹತ್ಯೆಗೈದ ವ್ಯಕ್ತಿ ಮೃತ ಯುವತಿಯ ಸೋದರನಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಈತನನ್ನು ಪೊಲೀಸರು ಬಂಧಿಸಿದ್ದಾರೆ.