ಕೊರೊನಾ ನೆಗೆಟಿವ್ ಇದ್ದ ಮಹಿಳೆಯೊಬ್ಬರು ಹೆತ್ತ ಮಗುವಿಗೆ ಪಾಸಿಟಿವ್ ಬಂದಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದ್ದು, ಕುಟುಂಬದವರು ಅಚ್ಚರಿಗೆ ಒಳಗಾಗಿದ್ದಾರೆ.
ಮೇ 25ರಂದು 26 ವರ್ಷದ ಮಹಿಳೆಗೆ ಹೆರಿಗೆ ಆಗಿದ್ದು, ಹೆರಿಗೆಗೂ ಮುನ್ನ ವೈದ್ಯರು ಕೋವಿಡ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಎಂದು ವರದಿ ಬಂದಿತ್ತು. ಆದರೆ ಹೆಣ್ಣು ಮಗು ಜನಿಸಿದ್ದು, ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ಬಂದಿದೆ.
ವಾರಣಾಸಿಯ ಬಾನರಾಸ್ ಹಿಂದೂ ಯುನಿರ್ವಸಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಕಾಂಟ್ ಬಡಾವಣೆಯ ಮಹಿಳೆಯಲ್ಲಿ ಈ ವಿಚಿತ್ರ ಕಂಡು ಬಂದಿದ್ದು, ವೈದ್ಯರು ಕೆಲವು ದಿನಗಳ ನಂತರ ತಾಯಿ ಹಾಗೂ ಮಗುವನ್ನು ಮತ್ತೊಮ್ಮೆ ಕೋವಿಡ್ ಟೆಸ್ಟ್ ಗೆ ಒಳಪಡಿಸಲು ನಿರ್ಧರಿಸಿದ್ದಾರೆ.
ತಾಯಿಗೆ ನೆಗೆಟಿವ್ ಹಾಗೂ ಮಗುವಿಗೆ ಪಾಸಿಟಿವ್ ಬಂದಿರುವುದರಲ್ಲಿ ಅಚ್ಚರಿಯೇನಿಲ್ಲ. ಆರ್ ಟಿ ಪಿಸಿಆರ್ ಶೇ.70 ಸರಿಯಾದ ಫಲಿತಾಂಶ ನೀಡುತ್ತದೆ. ಬಹುಶಃ ಮಹಿಳೆ ಅತ್ಯಂತ ಸೂಕ್ಷ್ಮವಾಗಿ ಇರುವುದರಿಂದ ಪರೀಕ್ಷೆಯಲ್ಲಿ ಕಂಡು ಬಾರದೇ ಇರಬಹುದು ಎಂದು ಆಸ್ಪತ್ರೆ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.