ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಾಲು ಮಾರಾಟ ಕುಸಿದಿರುವುದರಿಂದ ರೈತರಿಂದ ಹಾಲು ಖರೀದಿಯನ್ನು ಸ್ಥಗಿತಗೊಳಿಸಲು ಕೆಎಂಎಫ್ ಚಿಂತನೆ ನಡೆಸಿದೆ.
ಒಂದು ಕಡೆ ಹಾಲಿನ ಉತ್ಪಾದನೆ ಪ್ರಮಾಣ ದಿನೇ ದಿನೇ ಹೆಚ್ಚುತ್ತಲೇ ಇದ್ದರೆ, ಮತ್ತೊಂದೆಡೆ ಹಾಲು ಖರೀದಿ ಪ್ರಮಾಣ ಕುಸಿಯುತ್ತಲೇ ಇದೆ. ಇದರಿಂದ ಕೆಎಂಎಫ್ ಸಂಕಷ್ಟಕ್ಕೆ ಸಿಲುಕಿದೆ.
ರೈತರಿಂದ ಕೆಎಂಎಫ್ ಪ್ರತಿ ನಿತ್ಯ 88 ಲಕ್ಷ ಲೀಟರ್ ಹಾಲು ಸಂಗ್ರಹಿಸುತ್ತಿದ್ದು, ನಿತ್ಯ 35 ಲಕ್ಷ ಲೀಟರ್ ಹಾಲು ಹೆಚ್ಚುವರಿ ಯಾಗಿ ಸಂಗ್ರಹ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರಕ್ಕೆ 2 ದಿನ ಹಾಲು ಖರೀದಿ ಸ್ಥಗಿತಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.
ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲಿನಿಂದ ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಆದರೆ ಹಾಲಿನ ಪುಡಿ ಪರಿವರ್ತನೆಯ ಸಾಮರ್ಥ್ಯ ಕೂಡ ಮೀತಿ ಮೀರಿದೆ. ಇದರಿಂದ ರೈತರಿಂದ ವಾರದಲ್ಲಿ ಎರಡು ದಿನ ಹಾಲು ಖರೀದಿ ಮಾಡದಿರಲು ಚಿಂತನೆ ನಡೆದಿದೆ.
ರೈತರಿಂದ ಹಾಲು ಖರೀದಿ ಸ್ಥಗಿತಗೊಳಿಸಿದರೆ ಈಗಾಗಲೇ ಲಾಕ್ ಡೌನ್ ನಿಂದ ಆದಾಯ ಮೂಲ ಇಲ್ಲದೇ ಕಂಗೆಟ್ಟಿರುವ ಗ್ರಾಮೀಣ ಪ್ರದೇಶದ ರೈತರು ಮತ್ತಷ್ಟು ಸಂಕಷ್ಟಕ್ಎಕ ಸಿಲುಕುವ ಸಾಧ್ಯತೆ ಇದೆ.