ಮಂಡ್ಯ: ಅನುಮಾನಾಸ್ಪದ ರೀತಿ ಮನೆಯಲ್ಲಿ ಬೆಂಕಿ ದುರಂತ ನಡೆದು ಇಬ್ಬರು ಸಜಿವ ದಹನವಾಗಿ ಮತ್ತೊಬ್ಬರ ಪರಿಸ್ಥಿತಿ ಗಂಭೀರವಾಗಿರುವಂತ ಘಟನೆ ಮಂಡ್ಯದ ನಾಗಮಂಗಲದ ಅಗಚನಹಳ್ಳಿ ಗ್ರಾಮದಲ್ಲಿ ನಡೆದಿದೆ.
4 ವರ್ಷದ ಬಾಲಕ ಮತ್ತು ದೀಪಕ್ ಎಂಬುವವರು ಸ್ಥಳದಲ್ಲೇ ಸಜೀವ ದಹನವಾಗಿದ್ರೆ, ಭರತ್ ಎಂಬ ವ್ಯಕ್ತಿಯ ಪರಿಸ್ಥಿತಿ ಗಂಭೀರವಾಗಿದೆ. ಕಳಸ ಮೂಲದ ಪೈಂಟರ್ ಭರತ್ ಎಂಬುವವರು ಪತ್ನಿಯಿಂದ ದೂರವಾಗಿ ತನ್ನ 4 ವರ್ಷದ ಮಗನೊಂದಿಗೆ ನಾಗಮಂಗಲದ ಅಗಚನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದರು.
ನಿನ್ನೆ ರಾತ್ರಿ ಭರತ್ ತನ್ನ ಸಂಬಂಧಿ ದೀಪಕ್ ಮತ್ತು ದೀಪಕ್ ಸ್ನೇಹಿತನ ಜೊತೆ ತನ್ನ ಮನೆಯಲ್ಲಿ ಮದ್ಯಪಾನ ಆಯೋಜನೆ ಮಾಡಿದ್ದರು. ಈ ಸಂದರ್ಭ ಮೂವರು ಕಂಠ ಪೂರ್ತಿ ಮದ್ಯ ಸೇವಿಸಿದ್ದಾರೆ. ಆದರೆ ಬೆಳಗಿನ ಜಾವ ಅಗ್ನಿ ದುರಂತ ನಡೆದು ಭರತ್ ಪುತ್ರ ಹಾಗೂ ದೀಪಕ್ ಸಜೀವ ದಹನವಾಗಿದ್ದಾರೆ ಅಂತ ಹೇಳಲಾಗುತ್ತಿದೆ.
ಮತ್ತೊಂದು ಕಡೆ ಭರತ್ ಮನೆಯನ್ನ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂದಿದ್ದು, ಇದು ಅನುಮಾನಕ್ಕೆ ಎಡೆಮಾಡಿಕೊಟ್ಟದೆ. ಸದ್ಯ ಬೆಳ್ಳೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಭರತ್ನನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ.