75 ಸಾವಿರ ವಯಲ್ಸ್‌ ಬ್ಲ್ಯಾಕ್‌ ಫಂಗಸ್‌ ಔಷಧಿ ಖರೀದಿಗೆ ಆದೇಶ: ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಕೊಡಲಾಗುವ ಲೈಸೋಮಲ್‌ ಅಂಫೋಟೆರಿಸಿನ್‌- ಬಿ (Liposomal Amphotericin -B) ಔಷಧಿಯ 75 ಸಾವಿರ ವಯಲ್ಸ್ ಖರೀದಿಗೆ ಆದೇಶ ನೀಡಲಾಗಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾತಾಯಣ ತಿಳಿಸಿದ್ದಾರೆ.

ಮುಂಬೈನ ಭಾರತ್‌ ಸೀರಂ ಕಂಪನಿಗೆ 50 ಸಾವಿರ ವಯಲ್ಸ್‌ ಹಾಗೂ ಬೆಂಗಳೂರಿನ ಮೈಲಾನ್‌ ಫಾರ್ಮಾಸ್ಯೂಟಿಕಲ್‌ ಕಂಪನಿಗೆ 25,000 ವಯಲ್ಸ್‌ ಲೈಸೋಮಲ್‌ ಅಂಫೋಟೆರಿಸಿನ್‌ ಖರೀದಿಗೆ ಆದೇಶ ನೀಡಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.

ಈ ಎರಡೂ ಕಂಪನಿಗಳಿಗೆ ಗುರುವಾರವೇ (ಮೇ 27) ರಾಜ್ಯ ಔಷಧಿ ಖರೀದಿ ಪೂರೈಕೆ ನಿಗಮದ ವತಿಯಿಂದ ಖರೀದಿ ಆದೇಶ ನೀಡಲಾಗಿದ್ದು, ಸೀರಂ ಕಂಪನಿ ಏಳು ದಿನದಲ್ಲಿ ಹಾಗೂ ಮೈಲಾನ್‌ ಕಂಪನಿ ಮೂರು ದಿನದಲ್ಲಿ ಇಷ್ಟೂ ಔಷಧಿಯನ್ನು ಪೂರೈಕೆ ಮಾಡಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!