ಮೊಬೈಲ್ ರಿಚಾರ್ಜ್ ಸೇರಿದಂತೆ ಸ್ವಯಂ ಅಥವಾ ರಿನ್ಯೂವಲ್ ಮಾಡುವ ಡಿಜಿಟಲ್ ಪೇಮೆಂಟ್ ಮಾಡುವ ಪದ್ಧತಿ ನೂತನ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ವಯಂ ಪಾವತಿ ಪದ್ಧತಿ ಮಾರ್ಚ್ 31ಕ್ಕೆ ಅಂತ್ಯಗೊಳ್ಳಲಿದ್ದು, ನೂತನ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಸಂಖ್ಯೆ ಮೂಲಕ ಪಾವತಿಸುವ ಪದ್ಧತಿಗಳು ರದ್ದಾಗಲಿದ್ದು, ಹೊಸ ಮಾದರಿಯ ಪಾವತಿ ಪದ್ಧತಿ ಜಾರಿಗೆ ಬರಲಿದೆ.
ಪಾವತಿಗೆ ಸಂಬಂಧಪಟ್ಟಂತೆ ಬ್ಯಾಂಕ್ ಗಳು ಗ್ರಾಹಕರಿಗೆ ಮುನ್ಸೂಚನೆ ನೀಡಬೇಕು. ಗ್ರಾಹಕರ ಗಮನಕ್ಕೆ ತಂದ ನಂತರವೇ ಮುಂದಿನ ಹಂತದ ಪ್ರಕ್ರಿಯೆ ಆರಂಭಿಸಬೇಕು ಎಂದು ಆರ್ ಸಿಬಿ ಹೇಳಿದೆ.