ಮುಂಬೈ: ಕೊರೋನಾ ಸೋಂಕು ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಿನೇ ದಿನೇ ಹೆಚ್ಚುತ್ತಿವೆ. ಲಾಕ್ಡೌನ್, ಸೀಲ್ಡೌನ್, ನೈಟ್ ಕರ್ಫ್ಯೂ ಸೇರಿದಂತೆ ಕೊರೋನಾ ತಡೆಗೆ ಹಲವು ಉಪಾಯ ಹೂಡಿದರೂ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇವೆ.
ಹೀಗಾಗಿ ನಾಸಿಕ್ನಲ್ಲಿ ಕೊರೋನಾ ತಡೆಗೆ ವಿನೂತನ ಉಪಾಯವೊಂದನ್ನು ಮಾಡಲಾಗಿದೆ. ಮಾರುಕಟ್ಟೆಯನ್ನು ಪ್ರವೇಶಿಸಲು ಐದು ರೂ ನೀಡಿ ಟಿಕೆಟ್ ಖರೀದಿಸಬೇಕು. ಒಂದು ಗಂಟೆ ಅವಧಿಗೆ 5ರೂ.ಗಳನ್ನು ಪಾವತಿಸಬೇಕು. ಅವಶ್ಯಕತೆ ಇಲ್ಲದಿದ್ದರೂ ಮಾರುಕಟ್ಟೆಯಲ್ಲಿ ಸುತ್ತಾಡುವವರನ್ನು ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ನಾಸಿಕ್ನಲ್ಲಿ ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ವಿನೂತನ ಐಡಿಯಾ ಮಾಡಿದ್ದೇವೆ. ಲಾಕ್ಡೌನ್ ಬದಲು ಹೀಗೆ ಮಾಡಿದರೆ ಸುಖಾಸುಮ್ಮನೇ ಓಡಾಡುವವರನ್ನು ತಪ್ಪಿಸಿದಂತಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ. ನಾಸಿಕ್ ಜಿಲ್ಲಾಡಳಿತ ಈ ವಿನೂತನ ಉಪಾಯ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.