ಬಿಜೆಪಿ ಮುಖಂಡ ಮನೆಯ ಸಮೀಪದ ಉದ್ಯಾನವನದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಬಿಜೆಪಿಯ ಮಾಜಿ ರಾಜ್ಯ ಉಪಾಧ್ಯಕ್ಷರಾಗಿದ್ದ 58 ವರ್ಷದ ಜಿ.ಎಸ್. ಭಾವಾ ಆತ್ಮಹತ್ಯೆ ಮಾಡಿಕೊಂಡಿದ್ದು, ಮುಂಜಾನೆ ವಾಕಿಂಗ್ ಗೆ ಹೋಗಿದ್ದ ಸಾರ್ವಜನಿಕರು ಶವ ಕಂಡು ಆಘಾತಕ್ಕೆ ಒಳಗಾಗಿದ್ದಾರೆ.
ಬಿಜೆಪಿ ಮುಖಂಡನ ಸಾವಿಗೆ ಕೌಟುಂಬಿಕ ಸಮಸ್ಯೆ ಕಾರಣ ಎನ್ನಲಾಗಿದೆ. ಆದರೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.