ಆರ್ ಸಿ ಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ – ಲಖನೌ ವಿರುದ್ಧದ ಪಂದ್ಯಕ್ಕೆ ಹರ್ಷಲ್ ಪಟೇಲ್ ಫುಲ್ ಫಿಟ್

ಗುಜರಾತ್ ಟೈಟನ್ಸ್ ವಿರುದ್ಧ ಫೀಲ್ಡಿಂಗ್ ವೇಳೆ ಬಲಗೈಗೆ ಚೆಂಡು ತಗುಲಿಸಿಕೊಂಡು ಗಾಯಕ್ಕೆ ತುತ್ತಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗಿ ಹರ್ಷಲ್ ಪಟೇಲ್ (HARSHAL PATEL ) ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ.

ಲಖನೌ ಸೂಪರ್ ಜಯಂಟ್ಸ್ ವಿರುದ್ಧ ಐಪಿಎಲ್ ಪ್ಲೇಆಫ್ಸ್ಗೆ ಲಭ್ಯರಾಗುವ ಸಾಧ್ಯತೆ ದಟ್ಟವಾಗಿದೆ.ಗುಜರಾತ್ ಟೈಟನ್ಸ್ ವಿರುದ್ಧ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಶಾರ್ಟ್ ಕವರ್ಸ್ನಲ್ಲಿ ಚೆಂಡು ತಡೆಯುವಾಗ ಹರ್ಷಲ್ ಪಟೇಲ್ ತನ್ನ ಬಲಗೈಗೆ ಗಾಯ ಮಾಡಿಕೊಂಡಿದ್ದರು. ಇದರಿಂದ ರಕ್ತ ಸುರಿದಿತ್ತು. ಹಾಗಾಗಿ ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಒಂದೇ ಒಂದು ಓವರ್ ಬೌಲ್ ಮಾಡಲಷ್ಟೇ ಶಕ್ತರಾಗಿದ್ದರು, ನಂತರ ಮೈದಾನ ತೊರೆದಿದ್ದರು. ಇದನ್ನೂ ಓದಿ : – ಥಾಮಸ್ ಕಪ್ 2022 – ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ

ಹರ್ಷಲ್ ಪಟೇಲ್ ಅಲಭ್ಯತೆ ಹೊರತಾಗಿಯೂ ಆರ್ಸಿಬಿ ತಂಡದ ಬೌಲರ್ಗಳು ಗುಜರಾತ್ ಟೈಟನ್ಸ್ ತಂಡವನ್ನು 168 ರನ್ಗಳಿಗೆ ಕಟ್ಟಿ ಹಾಕಿದ್ದರು. ನಂತರ ವಿರಾಟ್ ಕೊಹ್ಲಿ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಸಹಾಯದಿಂದ ಆರ್ಸಿಬಿ 8 ವಿಕೆಟ್ಗಳಿಂದ ಭರ್ಜರಿ ಗೆಲುವು ಪಡೆದಿತ್ತು.
ಮುಂದಿನ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಐಪಿಎಲ್ ಪ್ಲೇಆಫ್ಸ್ಗೆ ಹರ್ಷಲ್ ಪಟೇಲ್ ಫುಲ್ ಫಿಟ್ ಆಗಲಿದ್ದಾರೆ. ಇದು ಆರ್ ಸಿ ಬಿ ಅಭಿಮಾನಿಗಳಿಗೆ ಖುಷಿ ನೀಡಿದೆ. ಇದನ್ನೂ ಓದಿ : – ಥಾಯ್ ಓಪನ್ – ಚೀನಾ ಎದುರು ಸೋತು ಸೆಮಿಸ್‌ನಿಂದ ಹೊರಬಿದ್ದ ಪಿ.ವಿ ಸಿಂಧು

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!