ಬೀಗರ ಊಟದಲ್ಲಿ ಸಾಮಾನ್ಯವಾಗಿ ಬೋಟಿ ಗೊಜ್ಜು ಇದ್ದೇ ಇರುತ್ತೆ. ಬೋಟಿಯಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಖನಿಜಗಳಂತಹ ಪೋಷಕಾಂಶಗಳು ಅಧಿಕವಾಗಿರುತ್ತದೆ. ಮನೆಯಲ್ಲಿಯೇ ಬೋಟಿ ಗೊಜ್ಜು ತಯಾರಿಸಬಹುದು.
ಬೇಕಾಗುವ ಪದಾರ್ಥಗಳು
ಬೋಟಿ – 1 ಸೆಟ್
ಕಡಲೆಕಾಳು – 100 ಗ್ರಾಂ
ಕಾಯಿ ತುರಿ – 1/2 ಬಟ್ಟಲು
ಈರುಳ್ಳಿ – 2
ಟೊಮೆಟೊ – 1 ಮೀಡಿಯಂ
ಶುಂಠಿ – ಅರ್ಧ ಇಂಚು
ಬೆಳ್ಳುಳ್ಳಿ – 7-8 ಎಸಳು
ದನಿಯಾ ಪುಡಿ – 1 ಚಮಚ
ಚಕ್ಕೆ, ಲವಂಗ – 3-4
ಕೆಂಪು ಒಣಮೆಣಸಿನಕಾಯಿ – 5-6
ಕೊತ್ತಂಬರಿ ಸೊಪ್ಪು – ಸ್ವಲ್ಪ
ಎಣ್ಣೆ – 3-4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಕಡಲೆಕಾಳನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿಡಿ. ಬೋಟಿಯನ್ನು ಚೆನ್ನಾಗಿ ಬಿಸಿನೀರು, ಸುಣ್ಣ ಸೇರಿಸಿ ಸ್ವಚ್ಛ ಮಾಡಿಕೊಳ್ಳಿ. ಇದನ್ನೂ ಓದಿ : – ಸಿಂಪಲ್ ಆಗಿ ಚಿಕನ್ ಗ್ರೇವಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ..
ಸ್ವಚ್ಛ ಮಾಡಿದ ನಂತರ ಬೋಟಿಯನ್ನು ಸಣ್ಣದಾಗಿ ಕಟ್ ಮಾಡಿಕೊಳ್ಳಿ. ಮತ್ತೆ ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆಯಿರಿ. ನಿಮಗೆ ಸ್ವಚ್ಛವಾಯಿತು ಅಂತ ಅನಿಸಿದ ಬಳಿಕ ನೀರಿಲ್ಲದಂತೆ ಚೆನ್ನಾಗಿ ಹಿಂಡಿ.
ಬಳಿಕ ಒಂದು ಪ್ಯಾನ್ ತೆಗೆದುಕೊಂಡು, ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ, ಕೆಂಪು ಒಣಮೆಣಸಿನಕಾಯಿ ಎಲ್ಲಾವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಅವುಗಳು ಫ್ರೈ ಆಗಿ ಸ್ವಲ್ಪ ತಣ್ಣಗಾದ ನಂತರ ಮಿಕ್ಸಿ ಜಾರ್ಗೆ ಕಾಯಿತುರಿ, ಟೊಮೆಟೋ, ಹುರಿಗಡಲೆ, ಫ್ರೈ ಮಾಡಿದ್ದ ಮಿಶ್ರಣ, ದನಿಯಾ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಒಂದು ಅಗಲವಾದ ಪಾತ್ರೆ ತೆಗೆದುಕೊಂಡು ಅದಕ್ಕೆ ನೀರು ಹಾಕಿ ಕುದಿಸಿ. ನೀರು ಕುದಿ ಬಂದ ಮೇಲೆ ನೆನೆಸಿದ್ದ ಕಡಲೆಕಾಳನ್ನು ತೊಳೆದು ಹಾಕಿ. ಮಿಶ್ರಣ ಮಾಡಿ.
ಆ ಮಿಶ್ರಣವನ್ನು 5 ನಿಮಿಷಗಳ ಕಾಲ ಬೇಯಲು ಬಿಡಿ. ನಂತರ ಅದಕ್ಕೆ ತೊಳೆದು ಸಣ್ಣಗೆ ಹೆಚ್ಚಿದ್ದ ಬೋಟಿಯನ್ನು ಸೇರಿಸಿ, ಚೆನ್ನಾಗಿ ಕುದಿಯಲು ಬಿಡಿ. 5-10 ನಿಮಿಷಗಳ ಕಾಲ ಕಾಳು ಮತ್ತು ಬೋಟಿಯನ್ನು ಬೇಯಿಸಿ. ಅದು ಬೆಂದ ಮೇಲೆ ಅದಕ್ಕೆ ರುಬ್ಬಿದ ಖಾರದ ಮಿಶ್ರಣ ಹಾಗೂ ಉಪ್ಪು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ. 15-20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿದರೆ ಸೂಪರ್ ಟೇಸ್ಟಿ ಬೋಟಿ ಗೊಜ್ಜು ರೆಡಿ.
ಇದನ್ನೂ ಓದಿ : – ಈ ರೀತಿಯಾಗಿ ಮೊಟ್ಟೆ ಬಿರಿಯಾನಿ ಮಾಡಿ – ಮನೆ ಮಂದಿಯೆಲ್ಲ ಸವಿಯಿರಿ