ಬ್ರಾಹ್ಮಿ ಎಲೆಯಿಂದ ಪ್ರಯೋಜನಗಳೇನು ಗೊತ್ತಾ… ?

ಪ್ರತಿಯೊಂದು ಸೊಪ್ಪಿನಲ್ಲು ಏನಾದರೂ ವಿಶೇಷತೆ ಇದ್ದೇ ಇರುತ್ತದೆ ಅದರಲ್ಲಿ ಬ್ರಾಹ್ಮಿ ಎಲೆಯು ಒಂದು. ಬ್ರಾಹ್ಮಿ ಎಲೆ ಅಥವಾ ಒಂದೆಲಗ ಎನ್ನುವುದು ಹಲವಾರು ವಿಧದ ಔಷಧೀಯ ಗುಣಗಳನ್ನು ಹೊಂದಿರುವಂತಹ ಒಂದು ಸೊಪ್ಪು ಎಂದು ಹೇಳಬಹುದು.

ಇದನ್ನು ಹಿಂದಿನಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ತರಕಾರಿಯಾಗಿಯೂ ಪ್ರತಿನಿತ್ಯ ಸೇವಿಸಬಹುದು ಮತ್ತು ಔಷಧಿಗೆ ಗಿಡಮೂಲಿಕೆಯಾಗಿಯೂ ಬಳಸಬಹುದು. ಒಂದೆಲಗದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇದರಲ್ಲಿ ಮನಸ್ಸಿಗೆ ಶಮನ ನೀಡುವಂತಹ ಗುಣಗಳು ಕೂಡ ಇವೆ ಎಂದು ಕಂಡುಕೊಳ್ಳಲಾಗಿದೆ.

ಮಾನಸಿಕ ಒತ್ತಡವು ಹೆಚ್ಚಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುವುದು. ಈ ಕಾರಣ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತೀ ಅಗತ್ಯವಾಗಿದೆ. ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ. ಬ್ರಾಹ್ಮಿ ತುಂಬಾ ಪರಿಣಾಮಕಾರಿ ಔಷಧಿಯಾಗಿದ್ದು, ಇದು ಚಿಕಿತ್ಸಕ ಗುಣ ಹೊಂದಿದೆ ಹಾಗೂ ಮನಸ್ಸಿಗೆ ಕೂಡ ಶಮನ ನೀಡುವುದು. ಇದರಲ್ಲಿ ಒತ್ತಡ ನಿವಾರಕ ಹಾಗೂ ಖಿನ್ನತೆ ದೂರ ಮಾಡುವ ಲಕ್ಷಣಗಳು ಇವೆ. ಇದನ್ನೂ ಓದಿ : – ದಿನನಿತ್ಯ ದಾಳಿಂಬೆ ಹಣ್ಣನ್ನು ಸೇವಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ ?

ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುವುದು. ವಿಶೇಷವಾಗಿ ಕೂದಲಿನ ಬಗ್ಗೆ ಮಾತನಾಡುವುದಾದರೆ, ಆಯುರ್ವೇದವು ಅವುಗಳನ್ನು ಉದ್ದ, ದಪ್ಪ ಮತ್ತು ಹೊಳೆಯುವಂತೆ ಮಾಡಲು ಬಹಳ ಪರಿಣಾಮಕಾರಿಯಾಗಿದೆ. ಇವುಗಳಲ್ಲಿ ಒಂದು ಬ್ರಾಹ್ಮಿಯ ಬಳಕೆ. ಬ್ರಾಹ್ಮಿಯ ಬಳಕೆಯು ತಲೆಹೊಟ್ಟು ಅಥವಾ ಡ್ಯಾಂಡ್ರಫ್ ಸಮಸಗಯೆಗೆ ತುಂಬಾ ಪ್ರಯೋಜನಕಾರಿ. ಇದು ನೆತ್ತಿಯನ್ನು ಪೋಷಿಸಿ, ಆರೋಗ್ಯಕರವಾಗಿಸುತ್ತದೆ. ಇದು ನೆತ್ತಿಗೆ ಅಗತ್ಯವಾದ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ತಲೆಹೊಟ್ಟು ಸಮಸ್ಯೆಯು ಸಾಕಷ್ಟು ನಿವಾರಣೆಯಾಗುವುದು. ಇದನ್ನೂ ಓದಿ : – ದಾಸವಾಳದ ಹೂವಿನ ಪ್ರಯೋಜನಗಳೇನು ಗೊತ್ತಾ… ?

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!