ಬೆಟ್ಟದ ನೆಲ್ಲಿಕಾಯಿಯನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲ ಪ್ರಯೋಜನೆ ಇದೆ ನಿಮಗೆ ತಿಳಿದಿದೆಯೇ..?

ಬೆಟ್ಟದ ನೆಲ್ಲಿಕಾಯಿಯ (GOOSE BERRY ) ಆರೋಗ್ಯ ಪ್ರಯೋಜನಗಳು ಒಂದೆರಡಲ್ಲ. ಬಹಳ ಹಿಂದಿನಿಂದಲೂ ಆಯುರ್ವೇದ ಪದ್ಧತಿಯಲ್ಲಿ ಇದರ ಬಳಕೆ ನಡೆಯುತ್ತ ಬಂದಿದೆ. ಕೊರೊನಾ ಎಂಬ ಹೆಸರು ಕೇಳಿ ಬಂದಾಗಿನಿಂದ ಬೆಟ್ಟದ ನೆಲ್ಲಿಕಾಯಿಯ ಹೆಸರು ಕೂಡ ಎಲ್ಲಾ ಕಡೆ ಕೇಳಿ ಬರುತ್ತಿದೆ.

Know the miraculous benefits of Amla | NewsTrack English 1

ಏಕೆಂದರೆ ಇದರಲ್ಲಿ ವಿಟಮಿನ್ ‘ ಸಿ ‘ ಅಂಶ ಯಥೇಚ್ಛವಾಗಿದೆ ಎಂಬ ಕಾರಣಕ್ಕೆ. ಕೇವಲ ಈ ಸಂದರ್ಭಕ್ಕೆ ಮಾತ್ರವಲ್ಲದೆ ನಮಗೆ ಬಹಳ ಹಿಂದಿನಿಂದ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸಿ ಕೊಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಪಾತ್ರವನ್ನುಮರೆಯುವಂತಿಲ್ಲ. ದೇಹದ ಜೀರ್ಣ ಶಕ್ತಿಯನ್ನು ಹೆಚ್ಚು ಮಾಡುವುದರಿಂದ ಹಿಡಿದು ಮಧುಮೇಹ ರಕ್ತದ ಒತ್ತಡದಂತಹ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಬೆಟ್ಟದ ನೆಲ್ಲಿಕಾಯಿ ಉಪಯೋಗಕ್ಕೆ ಬರುತ್ತದೆ. ಬೆಟ್ಟದ ನೆಲ್ಲಿಕಾಯಿಯ ಜ್ಯೂಸ್ ಸೇವನೆ ಮಾಡಲು ಸ್ವಲ್ಪ ಕಹಿ ಅನುಭವ ಉಂಟು ಮಾಡುತ್ತದೆ. ಸೇವನೆ ಮಾಡಿದ ಮೇಲೆ ಬಾಯಿ ಮತ್ತು ನಾಲಿಗೆ ಸಿಹಿಯಾಗುತ್ತದೆ.

Indian Gooseberry (Amla) - 8 Uses for Hair

ಆರೋಗ್ಯ ತಜ್ಞರ ಪ್ರಕಾರ ಚಳಿಗಾಲದ ಸಮಯದಲ್ಲಿ ನಿಮ್ಮ ಶೀತ, ಕೆಮ್ಮು, ಜ್ವರ, ನೆಗಡಿ, ಬಾಯಿ ಹುಣ್ಣು ಇತ್ಯಾದಿಗಳ ಸಮಸ್ಯೆಗೆ ಅತ್ಯಂತ ಸುಲಭವಾಗಿ ಮನೆ ಮದ್ದಿನ ಮೂಲಕ ಪರಿಹಾರ ಮಾಡಿಕೊಳ್ಳಬೇಕು ಎಂದರೆ 2 ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಜ್ಯೂಸ್ ನೊಂದಿಗೆ ಅಷ್ಟೇ ಪ್ರಮಾಣದ ಹಸಿ ಜೇನು ತುಪ್ಪವನ್ನು ಸೇರಿಸಿ ಪ್ರತಿ ದಿನವೂ ಸೇವನೆ ಮಾಡಿ. ಶೀತ ಮತ್ತು ಕೆಮ್ಮಿನ ಸಮಸ್ಯೆಗಳು ಬಹಳ ಬೇಗ ನಿಮ್ಮಿಂದ ದೂರವಾಗುತ್ತವೆ. ಇದನ್ನೂ ಓದಿ : – 2A ಮೀಸಲಾತಿಗಾಗಿ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇವೆ – ಜಯಮೃತ್ಯುಂಜಯ ಸ್ವಾಮೀಜಿ

know about kannada and Karnataka: Star Gooseberry and Indian Gooseberry in  Kannada | Nellikayi in English

ಸ್ವಲ್ಪ ಉಗುರು ಬೆಚ್ಚಗಿನ ನೀರಿನಲ್ಲಿ ಎರಡು ಟೀ ಚಮಚದಷ್ಟು ಬೆಟ್ಟದ ನೆಲ್ಲಿಕಾಯಿ ರಸವನ್ನು ಮಿಶ್ರಣ ಮಾಡಿ ದಿನದಲ್ಲಿ ಎರಡು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು ಬಹಳ ಬೇಗನೆ ವಾಸಿಯಾಗುತ್ತವೆ.ರಕ್ತದ ಒತ್ತಡ, ಮಧುಮೇಹ ಇದ್ದವರಿಗೆ ಹೃದಯದ ಸಮಸ್ಯೆ ಸಾಮಾನ್ಯ. ಕೆಲವರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳು ಹೆಚ್ಚಾದಷ್ಟು ಹೃದಯದ ಆರೋಗ್ಯ ಹದಗೆಡುತ್ತಾ ಹೋಗುತ್ತವೆ.ಅಮೈನೋ ಆಮ್ಲಗಳು ಮತ್ತು ಆಂಟಿ – ಆಕ್ಸಿಡೆಂಟ್ ಅಂಶಗಳು ನಿಮ್ಮ ಹೃದಯದ ಕಾರ್ಯ ಚಟುವಟಿಕೆಯನ್ನು ಉತ್ತಮಗೊಳಿಸುವಲ್ಲಿ ಸಹಾಯಕ್ಕೆ ಬರುತ್ತವೆ. ಈ ಎರಡು ಅಂಶಗಳು ಬೆಟ್ಟದ ನೆಲ್ಲಿಕಾಯಿಯಲ್ಲಿ ಕಂಡು ಬರುತ್ತದೆ. ಇದನ್ನೂ ಓದಿ : – ಜೂ.30 ರವರೆಗೆ ತಿರುಮಲದಲ್ಲಿ ಕೆಲವು ಸಾಪ್ತಾಹಿಕ ಸೇವೆಗಳು ಸ್ಥಗಿತ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!