ಬಾಹ್ಯಾಕಾಶಕ್ಕೆ ಮನುಷ್ಯರ ನಗ್ನ ಚಿತ್ರ ರವಾನಿಸಲು ನಾಸಾ ವಿಜ್ಞಾನಿಗಳ ಚಿಂತನೆ

ಅನ್ಯಗ್ರಹ ಜೀವಿಗಳು ಮನುಷ್ಯರ ಕಡೆಗೆ ಲೈಂಗಿಕವಾಗಿ ಆಕರ್ಷಿತವಾಗುತ್ತವೆ ಎಂಬ ನಂಬಿಕೆ ವಿಜ್ಞಾನಿಗಳಲ್ಲಿ ಬಲವಾಗಿ ಮೂಡಿದೆ. ಏಲಿಯನ್ಗಳ ಗಮನ ಸೆಳೆಯಲು ಬಾಹ್ಯಾಕಾಶಕ್ಕೆ ಮನುಷ್ಯರ ನಗ್ನ ಚಿತ್ರಗಳನ್ನು ಕಳುಹಿಸಲು ನಾಸಾ ವಿಜ್ಞಾನಿಗಳು ಚಿಂತನೆ ನಡೆಸಿದ್ದಾರೆ.

Should we accept the existence of aliens | ALIENS MYSTERY : क्या अब एलियंस  के वजूद को मान लेना चाहिए | Patrika News

ಬೇರೆ ಗ್ರಹಗಳಲ್ಲಿ ಜೀವಿಗಳು ವಾಸಿಸುತ್ತಿರುವುದು ಸತ್ಯ ಎಂದು ವಿಜ್ಞಾನಿಗಳು ನಂಬಿದ್ದಾರೆ. ಇದುವರೆಗೂ ಅದಕ್ಕೆ ಸ್ಪಷ್ಟ ಪುರಾವೆ ದೊರಕದೆ ಇದ್ದರೂ, ಅಂತಹ ಅನುಭವಗಳು ದಾಖಲಾಗಿರುವ ಬಗ್ಗೆ ವರದಿಗಳಿವೆ. ಮತ್ತೊಂದು ಜೀವ ಮಾದರಿ ಜತೆಗೆ ಸಮರ್ಪಕ ಸಂಪರ್ಕ ಸಾಧನೆ ಸಾಧ್ಯ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. ಕಳೆದ 150 ವರ್ಷಗಳ ವೈಜ್ಞಾನಿಕ ಪ್ರಯತ್ನಗಳು ವಿಫಲವಾಗಿವೆ.

ಅನ್ಯಗ್ರಹ ಜೀವಿಗಳನ್ನು ಆಕರ್ಷಿಸಲು ನಗ್ನ ಚಿತ್ರಗಳು!

ಹೀಗಾಗಿ ಅನ್ಯಗ್ರಹ ಜೀವಿಗಳನ್ನು ಸೆಳೆಯಲು ಮಹಿಳೆ ಮತ್ತು ಪುರುಷನ ಬೆತ್ತಲೆ ಪಿಕ್ಸಲೇಟೆಡ್ ರೇಖಾಚಿತ್ರವನ್ನು ಕಳುಹಿಸಲು ಆಲೋಚಿಸಲಾಗಿದೆ. ಬೆತ್ತಲಾಗಿರುವ ರೇಖಾಚಿತ್ರದಲ್ಲಿ ಮಹಿಳೆ ಮತ್ತು ಪುರುಷ ‘ಹಲೋ’ ಎನ್ನುವಂತೆ ಕೈ ಬೀಸಿರುವುದು ಅನ್ಯಗ್ರಹ ಜೀವಿಗಳಿಗೆ ಆಹ್ವಾನ ನೀಡಿದಂತೆ ಇರಲಿದೆ.

Why Aren't The Aliens Here Already? | Colorado Public Radio

‘ಬೀಕಾನ್ ಇನ್ ದಿ ಗ್ಯಾಲಕ್ಸಿ’ (ಬಿಐಟಿಜಿ) ಎಂಬ ಯೋಜನೆಯ ಭಾಗವಾಗಿ ಈ ಪ್ರಯತ್ನ ನಡೆಯುತ್ತಿದೆ. ಬಾಹ್ಯಾಕಾಶ ನಾಗರಿಕತೆಗೆ ಮನುಷ್ಯರನ್ನು ಸಂಪರ್ಕಿಸುವಂತೆ ಆಹ್ವಾನ ನೀಡುವ ಸಂದೇಶ ರವಾನಿಸುವುದು ಇದರ ಉದ್ದೇಶವಾಗಿದೆ. ಪಿಕ್ಸೆಲ್ನ ರೇಖಾಚಿತ್ರದ ಜತೆಯಲ್ಲಿ ವಿಜ್ಞಾನಿಗಳು ಗುರುತ್ವ ಮತ್ತು ಡಿಎನ್ಎ ಚಿತ್ರಣಗಳನ್ನು ಕೂಡ ವಿಜ್ಞಾನಿಗಳು ಸೇರಿಸಿದ್ದಾರೆ. ಬೈನರಿ ಸಂಕೇತದ ಸಂದೇಶವನ್ನು ಏಲಿಯನ್ ಗಳು ಅರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಭಾವಿಸಿದ್ದಾರೆ.

ಇದನ್ನೂ ಓದಿ : – ರಾಜ್ಯದಲ್ಲಿ ರಸಗೊಬ್ಬರ ಕೊರತೆಯಿಲ್ಲ – ಸಚಿವ ಬಿಸಿ ಪಾಟೀಲ್ ಸ್ಪಷ್ಟನೆ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!