ಚಿಕ್ಕಮಗಳೂರು: ಮಗನ ಅಮಾನುಷ ಕೃತ್ಯಕ್ಕೆ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆಯಲ್ಲಿ ನಡೆದಿದೆ. ಬಾಳೂರಿನ ಚನ್ನಹಡ್ಲು ಗ್ರಾಮದ ಪಾರ್ಶ್ವವಾಯುಪೀಡಿತ ಸುಂದರ ಪೂಜಾರಿ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಎರಡು ದಿನಗಳ ಹಿಂದೆ ತನ್ನ ಮಗ ಕುಡಿದ ಮತ್ತಿನಲ್ಲಿ ಕೊಡಲಿಯಿಂದ ತಲೆಗೆ ಕಡಿದು ಅಮಾನುಷ ಕೃತ್ಯ ಎಸಗಿದ್ದ. ಕಳೆದೊಂದು ವರ್ಷದಿಂದ ಪಾರ್ಶ್ವವಾಯು ಕಾಯಿಲೆಯಿಂದ ಮೂಲೆಯಲ್ಲಿ ನರಳುತ್ತಿದ್ದ ಸುಂದರ ಪೂಜಾರಿಯನ್ನು ತನ್ನ ಮಗ ನಿತೀಶ್ ಕಡಿದಿದ್ದಾನೆ.
ಎರಡು ಅಂಗವಿಕರ ಮಕ್ಕಳಿಗೆ ದಾನಮಾಡಿ ಕೂಡಿಟ್ಟ ಹಣಕ್ಕೆ ನಿಕೇಶ್ ಪೀಡಿಸುತ್ತಿದ್ದ ಎನ್ನಲಾಗಿದೆ. ಇಂದು ತಾಯಿ ಹತ್ತಿರ ಜಗಳ ಮಾಡಿ ಕೊನೆಗೆ ತಾಯಿಯನ್ನೂ ಮೂಲೆಗೆ ದೂಡಿ ತಂದೆಯ ತಲೆಗೆ ಕೊಡಲಿಯೇಟು ಕೊಟ್ಟ ಬಳಿಕ ಈ ಭೂಪ ಕಾರಿನಲ್ಲಿ ತಾನೇ ಹೋಗಿ ಕೊಡಲಿಸಹಿತ ಪೊಲೀಸರಿಗೆ ಶರಣಾಗಿದ್ದ!
ತೀವ್ರ ಗಾಯಗೊಂಡಿದ್ದ ಸುಂದರ ಪೂಜಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟಿದ್ದಾರೆ. ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.