ದುಬೈ: ತಮ್ಮ ಮನೆಯ ಬಾಲ್ಕನಿಯಲ್ಲಿ ಬೆತ್ತಲಾಗಿ ನಿಂತು ಪೋಸ್ ಕೊಡ್ತಿದ್ದ ಮಹಿಳೆಯರೀಗ ಪೊಲೀಸರ ಅತಿಥಿಯಾಗಿದ್ದಾರೆ. ದುಬೈನ ಮರೀನಾ ಅಪಾರ್ಟ್ಮೆಂಟ್ನಲ್ಲಿರುವ ತಮ್ಮ ಫ್ಲಾಟ್ನಲ್ಲಿ ಮಹಿಲೆಯರು ಈ ಕೃತ್ಯ ಎಸಗುತ್ತಿದ್ದರೆನ್ನಲಾಗಿದೆ.
ಮಹಿಳೆಯರು ಬೆತ್ತಲಾಗಿ ನಿಂತು ಖುದ್ದು ಲೈಂಗಿಕ ಚಟುವಟಿಕೆಗಳಿಗೆ ಆಹ್ವಾನ ನೀಡುವಂತಿದ್ದ ದೃಶ್ಯವನ್ನು ಎದುರು ಮನೆಯವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಸಾರ್ವಜನಿಕವಾಗಿ ಅಸಭ್ಯತೆ ಮೆರೆದ ಕಾರಣ ಈ ಎಲ್ಲರನ್ನು ಬಂಧಿಸಲಾಗಿದೆ ಎಂದು ದುಬೈ ಪೊಲೀಸರು ತಿಳಿಸಿದ್ದಾರೆ. ಪ್ರಚಾರದ ಗೀಳಿಗಾಗಿ ಈ ಯುವತಿಯರು ಬೆತ್ತಲಾಗಿದ್ದಾರೆ ಎಂದು ವರದಿಯಾಗಿದೆ.
ಈ ಯುವತಿಯರು ಮಾಡಿದಂಥ ಕೃತ್ಯಗಳಿಗೆ ಜೈಲು ಶಿಕ್ಷೆಯೊಂದಿಗೆ ದಂಡ ವಿಧಿಸುವ ಸಾಧ್ಯತೆಯಿದೆ. ಸದ್ಯಕ್ಕೆ ಬಂಧಿತರಾದ ಯುವತಿಯರನ್ನು ನ್ಯಾಯಾಂಗ ವಿಚಾರಣೆಗೆ ಒಳಪಡಿಸಲಾಗಿದೆ.
ಸೆರೆ ವಾಸ, 1 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾದ ವಿಡಿಯೋಗಳನ್ನು, ಲೈಂಗಿಕತೆಗೆ ಉತ್ತೇಜನ ನೀಡುವ ವಿಡಿಯೋ ಫೋಟೋ ಬಳಸುವಂತಿಲ್ಲ ಹಾಗೂ ಈ ರೀತಿಯ ಚಟುವಟಿಕೆಗಳಿಗೆ ಆಹ್ವಾನ ನೀಡುವಂತಿಲ್ಲ. ಅಕಸ್ಮಾತ್ ಈ ರೀತಿಯ ವರ್ತನೆಗಳು ಸಾರ್ವಜನಿಕರಲ್ಲಿ ಕಂಡು ಬಂದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.